ಪ್ರೀತಿಸಲು ನಿರಾಕರಿಸಿದ ಯುವತಿಗೆ ಬೆಂಕಿ ಹಚ್ಚಿದ ಪ್ರೇಮಿ!

ಸೋಮವಾರ, 15 ನವೆಂಬರ್ 2021 (19:42 IST)
ವಿಶಾಖಪಟ್ಟಣಂ : ತಾನು ಪ್ರೀತಿಸಿದ ಹುಡುಗಿ ತನ್ನನ್ನು ಮದುವೆಯಾಗಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ಆಕೆಗೆ ಬೆಂಕಿ ಹಚ್ಚಿ ತಾನೂ ಬೆಂಕಿ ಹಚ್ಚಿಕೊಂಡು ಸಾಯಲು ಪ್ರಯತ್ನಿಸಿದ ಘಟನೆ ಆಂಧ್ರಪ್ರದೇಶದ ವೈಜಾಗ್ನ ಖಾಸಗಿ ಲಾಡ್ಜ್‌ನಲ್ಲಿ ನಡೆದಿದೆ.
ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ವರದಿಗಳ ಪ್ರಕಾರ, ಯುವಕನ ಪ್ರಪೋಸಲ್ ಅನ್ನು ಯುವತಿ ತಿರಸ್ಕರಿಸಿದ ನಂತರ ಈ ಘಟನೆ ನಡೆದಿದೆ. ತಾನೂ ಬೆಂಕಿ ಹಚ್ಚಿಕೊಂಡು, ಯುವತಿಗೆ ಬೆಂಕಿ ಹಚ್ಚಿದ ಯುವಕನನ್ನು ತೆಲಂಗಾಣದ ಭೂಪಾಲಪಲ್ಲೆ ಮೂಲದ ಪಿ. ಹರ್ಷವರ್ಧನ್ ಎಂದು ಗುರುತಿಸಲಾಗಿದೆ. ಆ ಯುವತಿ ವಿಶಾಖಪಟ್ಟಣಂ ಮೂಲದವರು. ಇಬ್ಬರೂ ಖಾಸಗಿ ವಿಶ್ವವಿದ್ಯಾಲಯದಲ್ಲಿ ಒಟ್ಟಿಗೆ ಓದುತ್ತಿದ್ದರು. ಕೊರೊನಾ ಸಾಂಕ್ರಾಮಿಕ ರೋಗ ಹೆಚ್ಚಾಗಿದ್ದರಿಂದ ಅವರು ತಮ್ಮ ತಮ್ಮ ಮನೆಗಳಲ್ಲಿಯೇ ವಾಸವಾಗಿದ್ದರು.
ಹರ್ಷವರ್ಧನ್ ಆ ಯುವತಿಯನ್ನು ಪ್ರೀತಿ ಮಾಡುತ್ತಿರುವುದಾಗಿ ಪ್ರಪೋಸಲ್ ಮಾಡಿದ ಮೇಲೆ ಆಕೆ ಆತನನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಆತ ಕೋಪಗೊಂಡಿದ್ದ. ಇದರಿಂದ ವೈಜಾಗ್ನ ಲಾಡ್ಜ್ಗೆ ಆಕೆಯನ್ನು ಕರೆದುಕೊಂಡು ಹೋದ ಆತ ಆಕೆಯ ಮೇಲೆ ಪೆಟ್ರೋಲ್ ಸುರಿದು, ತಾನೂ ಬೆಂಕಿ ಹಚ್ಚಿಕೊಂಡಿದ್ದಾನೆ. ಬೆಂಕಿ ಜೋರಾಗಿ ಹೊತ್ತಿಕೊಂಡ ನಂತರ ಅವರಿಬ್ಬರೂ ಸಹಾಯಕ್ಕಾಗಿ ಹೊರಗೆ ಓಡಿಬಂದಿದ್ದಾರೆ.
ಅವರಿಬ್ಬರನ್ನೂ ಲಾಡ್ಜ್ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ಯುವತಿ ತಾನು ಆ ಯುವಕನನ್ನು ಮದುವೆಯಾಗಲು ಒಪ್ಪದ ಕಾರಣದಿಂದ ಈ ರೀತಿ ಕೊಲ್ಲಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಿದ್ದಾಳೆ. ಆದರೆ, ಆ ಯುವಕ ತಾವಿಬ್ಬರೂ ಒಬ್ಬರನ್ನೊಬ್ಬರು ಇಷ್ಟಪಡುತ್ತಿದ್ದೇವೆ. ಹೀಗಾಗಿಯೇ ಒಟ್ಟಿಗೇ ಸಾಯಲು ಪ್ರಯತ್ನಿಸಿದೆವು ಎಂದಿದ್ದಾನೆ. ಇಬ್ಬರ ಹೇಳಿಕೆಯೂ ಒಂದಕ್ಕೊಂದು ಸಂಬಂಧವಿಲ್ಲದಂತೆ ಇರುವುದರಿಂದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ