ಲಕ್ಕಿ ಗ್ರಾಹಕ್, ಡಿಜಿ ಧನ್ ಯೋಜನೆ: ನಿಮಗೆ ಬಹುಮಾನ ಬಂದಿದೆಯಾ ತಿಳಿಯೋದು ಹೇಗೆ?

ಸೋಮವಾರ, 26 ಡಿಸೆಂಬರ್ 2016 (17:06 IST)
ಕ್ರಿಸ್ಮಸ್ ಹಬ್ಬದ  ದಿನದಂದು ಆರಂಭವಾಗಿರೋ ಲಕ್ಕಿ ಗ್ರಾಹಕ್ ಹಾಗೂ ಡಿಜಿ ಧನ್ ವ್ಯಾಪರ್ ಯೋಜನೆ ಲಕ್ಕಿ ಡ್ರಾ ಸ್ಪರ್ಧೆಯ ಮೊದಲ ಸುತ್ತಿನ ಬಹುಮಾನ ವಿಜೇತರ ಹೆಸರು ಘೋಷಣೆಯಾಗಿದೆ. 

ಡಿಜಿಟಲ್ ಪೇಮೆಂಟ್ ಆಯ್ಕೆ ಬಳಸಿದ ವ್ಯಾಪಾರಿಗಳು ಮತ್ತು ಗ್ರಾಹಕರು 1000 ರೂಪಾಯಿ ಹಣ ಪಡೆಯಲು ಅರ್ಹರಾಗಿದ್ದು ಈ ಹಿಂದೆ ವಾಗ್ದಾನ ಮಾಡಿದಂತೆ ಕೇಂದ್ರ ಸರ್ಕಾರ ಮೊದಲನೇ ಸುತ್ತಿನ 15,000 ವಿಜೇತರಿಗೆ ತಲಾ 1,000 ರೂಪಾಯಿ ಬಹುಮಾನ ನೀಡಿದೆ. ಈ ಹಣವನ್ನು ವಿಜೇತರ ಖಾತೆಗೆ ಜಮಾ ಮಾಡಲಾಗಿದೆ. 
 
ನಿನ್ನೆಯಿಂದ ಮುಂದಿನ 100 ದಿನಗಳವರೆಗೆ ಈ ಸ್ಪರ್ಧೆ ಇರಲಿದ್ದು ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಮೊದಲನೇ ಸುತ್ತಿನ ಲಕ್ಕಿ ಡ್ರಾ ನಡೆಸಿದರು. 
 
ನೀವು ವಿಜೇತರೆಂದು ತಿಳಿದುಕೊಳ್ಳುವುದು ಹೇಗೆ? 
 
 
* https://digidhanlucky.mygov.in/ ಭೇಟಿ ಕೊಡಿ
 
*  ಗಿಳಿಹಸಿರು ಬಣ್ಣದ ವಿಂಡೋ ಮೂಡುತ್ತದೆ. ಬಲಭಾಗದಲ್ಲಿ CHECK IF YOU ARE A WINNER ಎಂಬ ಆಯ್ಕೆ ಕಾಣಿಸುತ್ತದೆ.
 
*  ಅದರಡಿ ಎರಡು ಆಯ್ಕೆಗಳಿದ್ದು ನೀವು ಗ್ರಾಹಕರಾಗಿದ್ದರೆ CONSUMER ಬಟನ್ ಮೇಲೆ ಕ್ಲಿಕ್ ಮಾಡಿ
 
* ನೀವು ವ್ಯಾಪಾರಿಗಳಾಗಿದ್ದಲ್ಲಿ MERCHANT ಬಟನ್ ಮೇಲೆ ಕ್ಲಿಕ್ ಮಾಡಿ.
 
* ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
 
* ನಿಮ್ಮ ಮೊಬೈಲ್‌ಗೆ ONE TIME PASS WORD ( ಒಟಿಪಿ) ಬರುತ್ತದೆ
 
* ಒಟಿಪಿ ನಮೂದಿಸಿದ ನಂತರ ನೀವು ಯಾವ ಆಯ್ಕೆಯ ಮೂಲಕ ಆನ್‍ಲೈನ್ ವಹಿವಾಟು ನಡೆಸಿದ್ದೀರೋ ಅದನ್ನು ಆಯ್ಕೆ ಮಾಡಿ(ಉದಾ: ರುಪೇ, ಯುಪಿಐ, ಆಧಾರ್ ಎನೇಬಲ್ಡ್ ಪೇಮೆಂಟ್, ಯುಎಸ್‍ಎಸ್‍ಡಿ)
 
* ಬಳಿಕ ಕಾರ್ಡಿನ ಸಂಖ್ಯೆ ಕೇಳುತ್ತದೆ.
 
* ಈ ಎಲ್ಲಾ ಮಾಹಿತಿಯನ್ನು ನಮೂದಿಸಿದ ಬಳಿಕ ನೀವು ಬಹುಮಾನ ಗೆದ್ದಿದ್ದೀರಾ ಇಲ್ಲವಾ ಎಂಬುದನ್ನು ತಿಳಿಯಬಹುದು.
 

ವೆಬ್ದುನಿಯಾವನ್ನು ಓದಿ