ನೆರೆಯ ನೇಪಾಳದಲ್ಲಿ ತೀವ್ರತೆಯ ಭೂಕಂಪ !

ಬುಧವಾರ, 28 ಡಿಸೆಂಬರ್ 2022 (09:47 IST)
ಕಠ್ಮಂಡು : ನೆರೆಯ ದೇಶ ನೇಪಾಳದಲ್ಲಿ ಬುಧವಾರ ಮುಂಜಾನೆ 4.7 ಹಾಗೂ 5.3 ತೀವ್ರತೆಯ 2 ಬಾರಿ ಭೂಕಂಪನ ಸಂಭವಿಸಿದೆ ಎಂದು ನೇಪಾಳದ ಭೂಕಂಪ ಮಾನಿಟರಿಂಗ್ ಹಾಗೂ ಸಂಶೋಧನಾ ಕೇಂದ್ರ ತಿಳಿಸಿದೆ.

ನೇಪಾಳದ ಬಾಗ್ಲುಂಗ್ ಜಿಲ್ಲೆಯಲ್ಲಿ ಸ್ಥಳೀಯ ಕಾಲಮಾನ 01:23 ಹಾಗೂ 02:07 ರ ವೇಳೆಗೆ ಭೂಕಂಪ ಸಂಭವಿಸಿದೆ. ಇದೇ ವೇಳೆ ಉತ್ತರಾಖಂಡದ ಉತ್ತರಕಾಶಿಯಲ್ಲೂ ಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಎನ್ಇಎಂಆರ್ಸಿ, 01:23ಕ್ಕೆ ಬಾಗ್ಲುಂಗ್ ಜಿಲ್ಲೆಯ ಅಧಿಕಾರಿ ಚೌರ್ ಬಳಿ 4.7 ತೀವ್ರತೆಯ ಭೂಕಂಪ ಸಂಭವಿಸಿದೆ. 02:07 ವೇಳೆಗೆ ಬಾಂಗ್ಲುಂಗ್ ಜಿಲ್ಲೆಯ ಖುಂಗಾ ಬಳಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ