ಸೊಲೊಮನ್ ದ್ವೀಪದಲ್ಲಿ ಭಾರೀ ಭೂಕಂಪ ದಾಖಲು
ಈ ಘಟನೆಯ ಬೆನ್ನಲ್ಲೇ ದಕ್ಷಿಣ ಪೆಸಿಫಿಕ್ನಲ್ಲಿರುವ ದ್ವೀಪರಾಷ್ಟ್ರ ಸೊಲೊಮನ್ನಲ್ಲಿ ಭಾರೀ ಭೂಕಂಪ ಸಂಭವಿಸಿದೆ.
ಮಂಗಳವಾರ ಮುಂಜಾನೆ ಸೊಲೊಮನ್ ದ್ವೀಪದಲ್ಲಿನ ಮಲಂಗೊದ ನೈಋತ್ಯ ಭಾಗದಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿರುವುದಾಗಿ ಅಮೆರಿಕದ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಭೂಕಂಪದ ಕೇಂದ್ರ ಬಿಂದುವನ್ನು 15 ಕಿ.ಮೀ ಆಳದಲ್ಲಿ ಗುರುತಿಸಲಾಗಿದೆ. ಸದ್ಯ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.
ಸೋಮವಾರ ಇಂಡೋನೇಷ್ಯಾದ ಜಾವಾದಲ್ಲಿ ಸಂಭವಿಸಿದ ಭೂಕಂಪದಲ್ಲಿ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಪಶ್ಚಿಮ ಜಾವಾ ಗವರ್ನರ್ ರಿದ್ವಾನ್ ಕಾಮಿಲ್ ಹೇಳಿದ್ದಾರೆ.