Maha Shivaratri 2025: ತ್ರಿವೇಣಿ ಸಂಗಮದಲ್ಲಿ 1 ಕೋಟಿಗೂ ಅಧಿಕ ಭಕ್ತರಿಂದ ಪುಣ್ಯ ಸ್ನಾನ

Sampriya

ಮಂಗಳವಾರ, 25 ಫೆಬ್ರವರಿ 2025 (18:14 IST)
Photo Courtesy X
ಪ್ರಯಾಗ್‌ರಾಜ್‌: ಸವಿಶ್ವದ ಅತಿದೊಡ್ಡ ಧಾರ್ಮಿಕ ಉತ್ಸವ ಮುಕ್ತಾಯಗೊಳ್ಳುತ್ತಿದ್ದಂತೆ, ಮಹಾಶಿವರಾತ್ರಿಯ ಸಂದರ್ಭದಲ್ಲಿ ಬುಧವಾರ 2025 ರ ಮಹಾ ಕುಂಭಮೇಳದ ಅಂತಿಮ ಅಮೃತ ಸ್ನಾನದಲ್ಲಿ 1 ಕೋಟಿಗೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಮಂಗಳವಾರ ಸಂಜೆಯಿಂದ ಮೇಳ ಪ್ರದೇಶವನ್ನು ವಾಹನ ರಹಿತ ವಲಯವನ್ನಾಗಿ ಮಾಡುವುದೂ ಸೇರಿದಂತೆ ಮಹಾಕುಂಭದ ಕೊನೆಯ ದಿನದಂದು ಯಾತ್ರಾರ್ಥಿಗಳ ಭಾರೀ ಒಳಹರಿವನ್ನು ಎದುರಿಸಲು ಉತ್ತರ ಪ್ರದೇಶ ಸರ್ಕಾರವು ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ.

ಜನವರಿ 13 ರಂದು ಮಹಾಕುಂಭ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಸುಮಾರು 64 ಕೋಟಿ ಭಕ್ತರು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.

ಜನವರಿ 13, 14, 29, ಫೆಬ್ರವರಿ 3 ಮತ್ತು 12 ರಂದು ಇಲ್ಲಿಯವರೆಗೆ ಒಟ್ಟು ಐದು ಅಮೃತ ಸ್ನಾನಗಳು ನಡೆದಿವೆ.

ರೈಲುಗಳು, ವಿಮಾನಗಳು ಮತ್ತು ರಸ್ತೆ ಮಾರ್ಗಗಳಳ ಮೂಲಕ ಬರುವ ಮೂಲಕ ಇತಿಹಾಸದಲ್ಲೇ ಅತೀ ದೊಡ್ಡ ಸಂಖ್ಯೆಯಲ್ಲೇ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ನಾಳೆ ಭಕ್ತರು ಪವಿತ್ರ ಸ್ನಾನ ಮಾಡಲು ಅನುಕೂಲವಾಗುವಂತೆ ಮಾಡಲಾದ ವಿಶೇಷ ವ್ಯವಸ್ಥೆಗಳ ಭಾಗವಾಗಿ, ಅಧಿಕಾರಿಗಳು ಲಕ್ನೋ ಮತ್ತು ಪ್ರತಾಪಗಢದಿಂದ ಬರುವ ಯಾತ್ರಾರ್ಥಿಗಳಿಗೆ ಫಾಫಮೌ ಘಾಟ್ ಅನ್ನು ಗೊತ್ತುಪಡಿಸಿದ್ದಾರೆ, ಆದರೆ ಅರೈಲ್ ಘಾಟ್ ಅನ್ನು ರೇವಾನ್, ಬಂಡಾ, ಚಿತ್ರಕೂಟ ಮತ್ತು ಮಿರ್ಜಾಪುರದ ಜನರಿಗೆ ಮೀಸಲಿಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ