ಉತ್ತರಪ್ರದೇಶ: ಮಹಾಕುಂಭಮೇಳದ ಬಗ್ಗೆ ಪ್ರತಿಪಕ್ಷಗಳ ಟೀಕೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತೀಕ್ಷ್ಣವಾಗಿ ವ್ಯಂಗ್ಯವಾಡಿ ಕೌಂಟರ್ ನೀಡಿದ್ದಾರೆ.
ಮಹಾಕುಂಭಮೇಳದಲ್ಲಿ ಯಾರು ಯಾರಿಗೆ ಏನೇನೆಲ್ಲಾ ಕಂಡಿತು, ದೊರಕಿತು ಎಂಬುದವರ ಬಗ್ಗೆ ಅವರು ವಿವರಿಸಿತ್ತು, ರಣಹದ್ದುಗಳಿಗೆ ಸತ್ತ ದೇಹಗಳು ಕಂಡವು, ಹಂದಿಗಳಿಗೆ ಬರೀ ಕೊಳಚೆ ಕಂಡಿತು ಎಂದು ಯುಪಿ ಅಸೆಂಬ್ಲಿಯಲ್ಲಿ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದರು.
ಈ ವಿಡಿಯೋ ತುಣುಕನ್ನು ಬಿಜೆಪಿ ನಾಯಕ ಸಿಟಿ ರವಿ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಯದ್ಭಾವಂ ತದ್ಭವತಿ ಎನ್ನುವ ಉಕ್ತಿಯಂತೆ ಕುಂಭಮೇಳದಲ್ಲಿ ಯಾರ್ಯಾರಿಗೆ ಏನೇನೆಲ್ಲಾ ಕಂಡಿತು, ದೊರಕಿತು ಎಂಬ ಪ್ರಶ್ನೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಉತ್ತರ.
ರಣಹದ್ದುಗಳಿಗೆ ಶವಗಳೇ ಕಂಡವು
ಯದ್ಭಾವಂ ತದ್ಭವತಿ ಎನ್ನುವ ಉಕ್ತಿಯಂತೆ ಕುಂಭಮೇಳದಲ್ಲಿ ಯಾರ್ಯಾರಿಗೆ ಏನೇನೆಲ್ಲಾ ಕಂಡಿತು, ದೊರಕಿತು ಎಂಬ ಪ್ರಶ್ನೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ @myogiadityanath ಅವರ ಉತ್ತರ…