ಮಹಾದ್ ಸೇತುವೆ ಕುಸಿತ: 20 ಶವ ಪತ್ತೆ

ಶನಿವಾರ, 6 ಆಗಸ್ಟ್ 2016 (09:10 IST)
ಮಹಾರಾಷ್ಟ್ರದ ಮಹಾಡ್ ಬಳಿ ಗೋವಾ- ಮಹಾರಾಷ್ಟ್ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ರಿಟಿಷ್ ಕಾಲದ ಸೇತುವೆ ಕುಸಿದ ಪರಿಣಾಮ ಸಾವಿತ್ರಿ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ 20 ದೇಹಗಳು ಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರೆದಿದೆ. ಮತ್ತೂ 30ಕ್ಕಿಂತ ಹೆಚ್ಚು ಜನರು ಕೊಚ್ಚಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.


ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ತಂಡಗಳು ಮತ್ತು ಸ್ಥಳೀಯರು ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ.

ನದಿಯಲ್ಲಿ ಮುಳುಗಿ ಹೋಗಿರುವ ಬಸ್ ಮತ್ತು ಕಾರ್‌ಗಳನ್ನು ಇನ್ನು ಹೊರಕ್ಕೆ ತೆಗೆದಿಲ್ಲ.

ಮೃತರ ಕುಟುಂಬದವರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಢ್ನವೀಸ್ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

ಕಳೆದ ಬುಧವಾರ ನಸುಕಿನಲ್ಲಿ ಸೇತುವೆ ಕುಸಿದ ಪರಿಣಾಮ ರಾಜ್ಯ ಸಾರಿಗೆ ಸಂಸ್ಥೆಯ ಎರಡು ಬಸ್ಸುಗಳು ಮತ್ತು 2 ಕಾರ್ ಸಾವಿತ್ರಿ ನದಿ ಪ್ರವಾಹದಲ್ಲಿ ಕೊಚ್ಚಿ ಹೊಗಿದ್ದು, ಸುಮಾರು 50 ಮಂದಿ ಕಣ್ಮರೆಯಾಗಿದ್ದರು.

ರಾಜ್ಯದಲ್ಲಿ ಮಳೆ ಮುಂದುವರೆದಿದ್ದು ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಮತ್ತೆ 2 ದಿನ ಮಳೆ ಮುಂದುವರೆಯುವುದಾಗಿ ಹವಾಮಾನ ಇಲಾಖೆ  ಮುನ್ಸೂಚನೆ ನೀಡಿದೆ.

ವೆಬ್ದುನಿಯಾವನ್ನು ಓದಿ