ಸೆಲ್ಫೀ ತೆಗೆದು ವಿವಾದಕ್ಕೊಳಗಾದ ಮಹಾರಾಷ್ಟ್ರ ಸಿಎಂ ಪತ್ನಿ ಕೊನೆಗೆ ಹೇಳಿದ್ದೇನು?
ಹಡಗೊಂದರ ಅಂಚಿನಲ್ಲಿ ಕುಳಿತು ಕಡಲ ಮಧ್ಯೆ ಸೆಲ್ಫೀ ತೆಗೆಯುವ ಅಮೃತಾ ಫಡ್ನವಿಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಮೂಲಕ ಅಪಾಯಕಾರಿ ಸ್ಥಳದಲ್ಲಿ ಭದ್ರತಾ ಅಧಿಕಾರಿಗಳಿಗೆ ಕಿವಿಗೊಡದೇ ಅಮೃತಾ ರಿಸ್ಕ್ ತೆಗೆದುಕೊಂಡಿದ್ದಾರೆ ಎಂದು ವಿವಾದವಾಗಿತ್ತು.
ಆದರೆ ಇದು ವಿವಾದವಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಅಮೃತಾ ಯಾರಿಗಾದರೂ ನಾನು ಮಾಡಿದ್ದು ತಪ್ಪು ಎನಿಸಿದರೆ ಕ್ಷಮೆ ಕೇಳುತ್ತೇನೆ. ಆದರೆ ನಾನು ಅಪಾಯಕಾರಿ ಸ್ಥಳದಲ್ಲಿ ಕುಳಿತಿರಲಿಲ್ಲ. ನಾನು ಕುಳಿತ ಸ್ಥಳದಿಂದ ಕೆಳಗೆ ಇನ್ನೂ ಎರಡು ಮೆಟ್ಟಿಲುಗಳಿದ್ದವು ಎಂದು ಅಮೃತಾ ಸ್ಪಷ್ಟನೆ ನೀಡಿದ್ದಾರೆ.