ಅಭಿಮಾನಿಗಳ ಸೆಲ್ಫೀ ಹುಚ್ಚಿಗೆ ವಿರಾಟ್ ಕೊಹ್ಲಿ ಕಿವಿಯೇ ಭಗ್ನ!

ಶುಕ್ರವಾರ, 8 ಜೂನ್ 2018 (09:15 IST)
ನವದೆಹಲಿ: ದೆಹಲಿಯಲ್ಲಿ ನಿನ್ನೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆ ಅನಾವರಣಗೊಂಡಿದ್ದು, ಇದರ ಜತೆಗೆ ಅಭಿಮಾನಿಗಳ ಸೆಲ್ಫೀ ತೆಗೆಯಲು ಅವಕಾಶ ನೀಡಲಾಗಿತ್ತು.

ಆದರೆ ಅಭಿಮಾನಿಗಳ ಸೆಲ್ಫೀ ಕ್ರೇಜ್ ಗೆ ಕೊಹ್ಲಿ ಪ್ರತಿಮೆಯ ಬಲ ಕಿವಿಯೇ ಭಗ್ನಗೊಂಡಿದೆ ಎನ್ನಲಾಗಿದೆ. ಕೆಲವು ವರದಿಗಳ ಪ್ರಕಾರ ಕೊಹ್ಲಿ ಪ್ರತಿಮೆಯ ಬಲ ಕಿವಿ ಹಾನಿಗೊಳಗಾಗಿದ್ದು, ಇದೀಗ ದುರಸ್ತಿಗೆ ನೀಡಲಾಗಿದೆ.

ಸದ್ಯಕ್ಕೆ ಪ್ರತಿಮೆಯನ್ನು ದುರಸ್ತಿಗೊಳಿಸಲು ವರ್ಕ್ ಶಾಪ್ ಗೆ ಕರೆದೊಯ್ಯಲಾಗಿದೆ ಎಂದು ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ