ಮನೆಗೆಲಸದಾಕೆಯ ಕೂದಲು ಕತ್ತರಿಸಿ ಚಿತ್ರಹಿಂಸೆ!
48 ವರ್ಷದ ಮಹಿಳೆ ಈಗ ಮಾಲಿಕರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಮಾಸಿಕ 7,000 ವೇತನಕ್ಕೆ ದಂಪತಿಯಿದ್ದ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಮಾಲಿಕರು ಹಲ್ಲೆ ನಡೆಸಿದ್ದಲ್ಲದೆ ಕೂದಲು ಕತ್ತರಿಸಿ ಚಿತ್ರಹಿಂಸೆ ನೀಡಿದ್ಧಾರೆ ಎನ್ನಲಾಗಿದೆ.
ಇದೀಗ ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ನಡೆಸಿದ ದಂಪತಿ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.