ಪಹಲ್ಗಾಮ್ ಗೆ ಇಂಟೆಲಿಜೆನ್ಸ್ ವರದಿ ಪಡೆದು ಮೋದಿ ಹೋಗಿರಲಿಲ್ಲ, ಸಾಮಾನ್ಯರ ಕತೆಯೇನು: ಮಲ್ಲಿಕಾರ್ಜುನ ಖರ್ಗೆ

Krishnaveni K

ಮಂಗಳವಾರ, 6 ಮೇ 2025 (17:07 IST)
ನವದೆಹಲಿ: ಇತ್ತೀಚೆಗೆ ಉಗ್ರ ದಾಳಿಯಾದ ಪಹಲ್ಗಾಮ್ ಗೆ ಇಂಟೆಲಿಜೆನ್ಸ್ ವರದಿಯ ಎಚ್ಚರಿಕೆ ಹಿನ್ನಲೆಯಲ್ಲಿ ಮೋದಿ ಹೋಗಿರಲಿಲ್ಲ. ಆದರೆ ಸಾಮಾನ್ಯರ ಕತೆಯೇನು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ವಾಗ್ದಾಳಿ ನಡೆಸಿದ್ದಾರೆ.

ಪಹಲ್ಗಾಮ್ ನಲ್ಲಿ ಉಗ್ರ ದಾಳಿಯಾಗುವ ಮೂರು ದಿನಗಳ ಮೊದಲು ಪ್ರಧಾನಿ ಮೋದಿ ಜಮ್ಮು ಕಾಶ್ಮೀರಕ್ಕೆ ತೆರಳಬೇಕಿತ್ತು. ಆದರೆ ಅಲ್ಲಿಗೆ ಹೋಗುವುದು ಸುರಕ್ಷಿತವಲ್ಲ ಎಂದು ಗುಪ್ತಚರ ವರದಿಗಳು ಹೇಳಿದ್ದವು. ಹೀಗಾಗಿ ಅವರು ಪ್ರವಾಸ ರದ್ದುಗೊಳಿಸಿದರು.

ಹೀಗಾಗಿ ಗುಪ್ತಚರ ಸಂಸ್ಥೆಗಳಿಗೆ ಇಲ್ಲಿ ಅಪಾಯವಿದೆ ಎನ್ನುವುದು ಮೊದಲೇ ಗೊತ್ತಿತ್ತು. ಹಾಗಿದ್ದರೂ ಯಾಕೆ ಸುರಕ್ಷತೆ ಕೈಗೊಳ್ಳಲಿಲ್ಲ. ಪಹಲ್ಗಾಮ್ ಉಗ್ರ ದಾಳಿ ಗುಪ್ತಚರ ಇಲಾಖೆಯ ವೈಫಲ್ಯವಲ್ಲದೆ ಇನ್ನೇನು ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಈ ದಾಳಿಗೆ ಕೇಂದ್ರ ಕೂಡಾ ಉತ್ತರದಾಯಿ. ಗುಪ್ತಚರ ವರದಿಯಿದ್ದರೂ ಸಾಮಾನ್ಯ ಜನರ ಜೀವ ಉಳಿಸುವಲ್ಲಿ ಕೇಂದ್ರ ವಿಫಲವಾಯಿತು ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.  ಹಾಗಿದ್ದರೂ ಈಗ ಪಾಕಿಸ್ತಾನದ ವಿರುದ್ಧ ಕೇಂದ್ರ ಕೈಗೊಳ್ಳುವ ನಿರ್ಧಾರಗಳಿಗೆ ನಮ್ಮ ಬೆಂಬಲವಿರುವುದಾಗಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ