ಮಡದಿಯ ಮೃತದೇಹವನ್ನು ಸೈಕಲ್ ನಲ್ಲಿ ಹೊತ್ತೊಯ್ದು ವೃದ್ಧ ಪತಿ

ಗುರುವಾರ, 29 ಏಪ್ರಿಲ್ 2021 (10:49 IST)
ಲಕ್ನೋ: ಕೊರೋನಾದಿಂದ ಸಾವನ್ನಪ್ಪಿದ ಪತ್ನಿಯ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲು ಸ್ಥಳೀಯರು ಒಪ್ಪದ ಕಾರಣ 70 ವರ್ಷದ ವೃದ್ಧ ಪತಿ ಮೃತದೇಹವನ್ನು ಸೈಕಲ್ ಮೇಲೆ ಹೊತ್ತೊಯ್ದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ಸ್ಥಳೀಯ ಸರ್ಕಾರಿ ಕೊರೋನಾ ಆಸ್ಪತ್ರೆಯಲ್ಲಿ ಪತ್ನಿ ಮೃತಪಟ್ಟಿದ್ದಳು. ಆಕೆಯ ಮೃತದೇಹವನ್ನು ಸ್ಥಳೀಯ ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು.

ಇದರಿಂದಾಗಿ ಬೇರೆ ದಾರಿ ಕಾಣದ ವೃದ್ಧಿ ಪತಿ ಆಕೆಯ ಮೃತದೇಹವನ್ನು ಸೈಕಲ್ ಗೆ ಕಟ್ಟಿ ಇನ್ನೊಂದೆಡೆ ಸಾಗಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ ಆಯತಪ್ಪಿ ಸೈಕಲ್ ಸಮೇತ ಬಿದ್ದಿದ್ದು, ಇದನ್ನು ಗಮನಸಿದ ಪೊಲೀಸ್ ಪೇದೆಯೊಬ್ಬರು ಸಹಾಯಕ್ಕೆ ಧಾವಿಸಿದ್ದಾರೆ. ಬಳಿಕ ಪೊಲೀಸರ ನೆರವಿನಿಂದ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ