ವರ್ಗಾವಣೆ ಕೇಳಿದ್ದಕ್ಕೆ ಪತ್ನಿ ಕಾಮತೃಷೆ ತೀರಿಸಬೇಕೆಂದು ಬೇಡಿಕೆಯಿಟ್ಟ ಬಾಸ್!

ಮಂಗಳವಾರ, 12 ಏಪ್ರಿಲ್ 2022 (09:40 IST)
ಲಕ್ನೋ: ವರ್ಗಾವಣೆ ನೀಡುವಂತೆ ಕೇಳಿದ್ದಕ್ಕೆ ನಿನ್ನ ಹೆಂಡತಿಯನ್ನು ಒಂದು ರಾತ್ರಿಗೆ ಕಳುಹಿಸು ಎಂದು ಅಸಭ್ಯವಾಗಿ ಕೇಳಿದ ಬಾಸ್ ನ ವರ್ತನೆಯಿಂದ ಬೇಸತ್ತ ನೌಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಬಾಸ್ ವರ್ತನೆಯಿಂದ ಬೇಸತ್ತು ಕಚೇರಿಯ ಹೊರಗೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಜ್ಯೂನಿಯರ್ ಇಂಜಿನಿಯರ್ ಮತ್ತು ಗುಮಾಸ್ತನನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಅಲ್ಲದೆ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ