ಪ್ರಿಯತಮೆ ಮೇಲೆ ಅತ್ಯಾಚಾರ ನಡೆದಿದ್ದಕ್ಕೆ ಈ ಪ್ರೇಮಿ ಮಾಡಿದ್ದೇನು ಗೊತ್ತಾ?
ಸೆಪ್ಟೆಂಬರ್ 1 ರಂದು ಕಟ್ಗೋಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಯುವಕ ಪ್ರೀತಿಸುತ್ತಿದ್ದ ಯುವತಿ ಮೇಲೆ ಇಬ್ಬರು ಕಾಮುಕರು ಅತ್ಯಾಚಾರವೆಸಗಿದ್ದರು. ಈ ಯುವಕ ಆತ್ಮಹತ್ಯೆ ಮಾಡಿದ ಪ್ರಕರಣದಲ್ಲಿ ಯುವತಿಯನ್ನು ವಿಚಾರಣೆಗೊಳಪಡಿಸುವಾಗ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ.
ಶಾಲೆಯೊಂದರ ಬಳಿ ಇಬ್ಬರೂ ಕುಳಿತಿದ್ದಾಗ ಇಬ್ಬರು ಕಾಮುಕರು ಯುವಕನ ಮೇಲೆ ಹಲ್ಲೆ ನಡೆಸಿ ಆತನ 17 ವರ್ಷದ ಪ್ರೇಮಿ ಮೇಲೆ ಅತ್ಯಾಚಾರವೆಸಗಿದ್ದರು. ಈ ಸಂದರ್ಭದಲ್ಲಿ ತನ್ನ ಹುಡುಗಿಯನ್ನು ಕಾಪಾಡಲು ಸಾಧ್ಯವಾಗಲಿಲ್ಲ ಎಂದು ಆತ ಮನನೊಂದಿದ್ದನಂತೆ. ಇದೇ ಕಾರಣಕ್ಕೆ ಈತ ಆತ್ಮಹತ್ಯೆಗೆ ಶರಣಾನಾಗಿದ್ದಾನೆ.