ಹಾರರ್ ಸಿನಿಮಾ ವೀಕ್ಷಿಸುವಾಗ ಹೃದಯಾಘಾತದಿಂದ ಮೃತಪಟ್ಟ ವೃದ್ಧ

ಶನಿವಾರ, 18 ಜೂನ್ 2016 (11:33 IST)
ಚಿತ್ರಮಂದಿರದಲ್ಲಿ ಹಾರರ್ ಸಿನಿಮಾ ವೀಕ್ಷಿಸುತ್ತಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ 
ಗುರುವಾರ ನಡೆದಿದೆ. 

ಮೃತನನ್ನು ಆಂಧ್ರಪ್ರದೇಶದ ಕಡಪಾ ಮೂಲದ ಜಿ. ರಾಮ್ ಮೋಹನ್ ಎಂದು ಹೇಳಲಾಗುತ್ತಿದ್ದು ಸುಮಾರು 60 ವರ್ಷ ಆತ ಪ್ರಸ್ತುತ ತಿರುವಣ್ಣಾಮಲೈನಲ್ಲಿರುವ ಆಶ್ರಮದಲ್ಲಿ ವಾಸವಾಗಿದ್ದ ಎಂದು ಹೇಳಲಾಗುತ್ತಿದೆ.
 
ನಗರದಲ್ಲಿರುವ ಬಾಲಸುಬ್ರಮಣಿಯಾರ್ ಚಿತ್ರಮಂದಿರದಲ್ಲಿ ಇತ್ತೀಚಿಗೆ ಬಿಡುಗಡೆಯಾಗಿದ್ದ ಹಾಲಿವುಡ್ ಹಾರರ್ ಸಿನಿಮಾ 'ದಿ 
ಕಂಜ್ಯೂರಿಂಗ್ 2' ಸಿನಿಮಾ ನೋಡುತ್ತಿದ್ದ ಅವರು ಏಕಾಏಕಿ ಎದೆನೋವು ಎಂದು ಹೇಳಿದ್ದಾರೆ.
 
ತಕ್ಷಣ ಅಂಬುಲೆನ್ಸ್ ತರಿಸಲಾಯಿತಾದರೂ ಅದಾಗಲೇ ಅವರು ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ