ಜೈಲಿಗೆ ಹೋಗುವುದನ್ನು ತಪ್ಪಿಸಲು ಸಾವಿನ ನಾಟಕವಾಡಿ ಸಿಕ್ಕಿಬಿದ್ದ!
ಸುದೇಶ್ ಕುಮಾರ್ ಎಂಬಾತ ಕೊಲೆ ಆರೋಪದಲ್ಲಿ ಜೈಲು ಪಾಲಾಗಿದ್ದ. ಕೆಲವು ದಿನಗಳ ಹಿಂದೆ ಪರೋಲ್ ಮೇಲೆ ಬಿಡುಗಡೆಯಾಗಿದ್ದ. ಆದರೆ ಮರಳಿ ಜೈಲಿಗೆ ಹೋಗುವುದನ್ನು ತಪ್ಪಿಸಲು ಪತ್ನಿಯ ಜೊತೆಗೂಡಿ ಸಾವಿನ ನಾಟಕವಾಡಿದ್ದ.
ಅದಕ್ಕಾಗಿ ತನ್ನ ಮನೆಗೆ ಕೆಲಸಕ್ಕೆ ಬಂದಿದ್ದ ನೌಕರನಿಗೆ ತನ್ನದೇ ಡ್ರೆಸ್ ತೊಡಿಸಿ ಮದ್ಯ ಕೊಡಿಸಿ ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ ಕೊಲೆ ಮಾಡಿದ್ದ. ಬಳಿಕ ಆತನ ಶವದ ಮುಖವನ್ನು ಸುಟ್ಟಿ ಆತನ ಜೇಬಿನಲ್ಲಿ ತನ್ನ ಐಡೆಂಟಿಟಿ ಕಾರ್ಡ್ ಇಟ್ಟು ತಾನೇ ಸಾವನ್ನಪ್ಪಿದಂತೆ ಕತೆ ಸೃಷ್ಟಿಸಿದ್ದ.
ಪೊಲೀಸರು ಮೃತದೇಹ ಗುರುತು ಹಚ್ಚಲು ಪತ್ನಿಗೆ ಹೇಳಿದಾಗ ಆಕೆ ನೀಡಿದ ಹೇಳಿಕೆ ಸಂಶಯಕ್ಕೀಡು ಮಾಡಿತ್ತು. ಹೀಗಾಗಿ ತನಿಖೆ ನಡೆಸಿದಾಗ ಗಂಡ-ಹೆಂಡಿರ ನಾಟಕ ಬಯಲಾಯ್ತು. ಇದೀಗ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.