ಮೇಕೆ ಕದ್ದು ಓಡುತ್ತಿದ್ದವರನ್ನು ಹಿಡಿಯಲು ಹೋದ ವ್ಯಕ್ತಿಯ ಮೇಲೆ ಕಾರು ಹರಿಸಿ ಕೊಂದ ಖದೀಮರು!
ರಾತ್ರಿ ವೇಳೆ ತನ್ನ ಮೂವರು ಮೇಕೆಗಳನ್ನು ಕದ್ದು ಓಡುತ್ತಿದ್ದ ಯುವಕರನ್ನು ಗಮನಿಸಿದ ವ್ಯಕ್ತಿ ತನ್ನ ಮೇಕೆಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಖದೀಮರು ವ್ಯಕ್ತಿಯ ಮೇಲೆಯೇ ಕಾರು ಹರಿಸಿ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ತೀವ್ರ ಗಾಯಗೊಂಡ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಸಂತ್ರಸ್ತನ ಪುತ್ರ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.