ಪತ್ನಿಯ ಪ್ರಿಯಕರನಿಗೆ ಬುದ್ಧಿ ಹೇಳಲು ಹೋದವ ತಾನೇ ಕೊಲೆಯಾದ!

ಸೋಮವಾರ, 29 ಆಗಸ್ಟ್ 2022 (08:20 IST)
ಮುಂಬೈ: ಪತ್ನಿಯ ಜೊತೆಗೆ ಸ್ನೇಹ-ಸಲುಗೆ ಹೊಂದಿದ್ದ ವ್ಯಕ್ತಿಗೆ ಎಚ್ಚರಿಕೆ ನೀಡಲು ಚಾಕು ಸಮೇತ ಹೋಗಿದ್ದ ಪತಿ ಅದೇ ಚಾಕುವಿನಿಂದ ಕೊಲೆಗೀಡಾದ ಘಟನೆ ನಡೆದಿದೆ.

ಥಾಣೆಯ 41 ವರ್ಷದ ವ್ಯಕ್ತಿ ಪತ್ನಿಯ ಸ್ನೇಹಿತನ ಮನೆಗೆ ಎಚ್ಚರಿಕೆ ನೀಡಲು ಹೋಗಿದ್ದ. ಪತ್ನಿ ಮತ್ತು ಆಕೆಯ ಸ್ನೇಹಿತ ಕಾಲೇಜು ದಿನಗಳಿಂದಲೂ ಸ್ನೇಹಿತರು. ಆದರೆ ಅವರಿಬ್ಬರೂ ಸಲುಗೆಯಿಂದ ಇದ್ದಿದ್ದು ಪತಿಗೆ ಇಷ್ಟವಾಗುತ್ತಿರಲಿಲ್ಲ.

ಹೀಗಾಗಿ ಆತನಿಗೆ ಎಚ್ಚರಿಕೆ ನೀಡಲು ಹೋಗಿದ್ದ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಅದೇ ಸಿಟ್ಟಿನಲ್ಲಿ ಸ್ನೇಹಿತ ಚಾಕುವಿನಿಂದ ಇರಿದಿದ್ದಾನೆ. ತೀವ್ರ ಗಾಯಗೊಂಡ ಪತಿ ಸಾವನ್ನಪ್ಪಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ