ದೈಹಿಕ ಸಂಬಂದಕ್ಕೆ ಒಲ್ಲೆನೆಂದಿದ್ದಕ್ಕೆ ಮಹಿಳೆಯ ಕೊಂದ ಸ್ನೇಹಿತ
ಇಬ್ಬರೂ ಗಾರ್ಮೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಮಹಿಳೆಯ ಜೊತೆ ಆರೋಪಿಗೆ ಸ್ನೇಹವಿತ್ತು. ಬಳಿಕ ಮಹಿಳೆ ಪ್ರತೀ ತಿಂಗಳು ಪ್ರಿಯಕರನಿಂದ 6000 ರೂ. ವಸೂಲಿ ಮಾಡುತ್ತಿದ್ದಳು. ಇದೇ ಸಲುಗೆಯಲ್ಲಿ ದೈಹಿಕ ಸಂಬಂಧ ಬೆಳೆಸಲು ಒತ್ತಾಯಿಸಿದ್ದ.
ಆದರೆ ಮಹಿಳೆ ಒಪ್ಪಿರಲಿಲ್ಲ. ಆಕೆಗೆ ಇನ್ನೊಬ್ಬನ ಜೊತೆಗೂ ಇದೇ ರೀತಿ ಸಂಬಂಧವಿರುವುದು ಆರೋಪಿಗೆ ತಿಳಿದುಬಂತು. ಇದೇ ಸಿಟ್ಟಿನಲ್ಲಿ ಆಕೆಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಕೊಲೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.