ಆನ್ ಲೈನ್ ನಲ್ಲಿ ಆನಿಯನ್ ರಿಂಗ್ ಫುಡ್ ಆರ್ಡರ್ ಮಾಡಿದ ವ್ಯಕ್ತಿಗೆ ಸಿಕ್ಕಿದ್ದೇನು?!
ಉಬೈದು ಎಂಬಾತ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ತನಗೆ ಆನ್ ಲೈನ್ ಫುಡ್ ಡೆಲಿವರಿಗೆ ಆರ್ಡರ್ ಕೊಟ್ಟಾಗ ಆದ ವಂಚನೆಯನ್ನು ರೀಲ್ಸ್ ಮಾಡಿ ಪ್ರಕಟಿಸಿದ್ದು, ನೆಟ್ಟಿಗರು ನಕ್ಕು ನಕ್ಕು ಸುಸ್ತಾಗಿದ್ದಾರೆ.
ಉಬೈದು ಆನ್ ಲೈನ್ ತಾಣದಲ್ಲಿ ಆನಿಯನ್ ರಿಂಗ್ ಎಂಬ ಖಾದ್ಯಕ್ಕೆ ಆರ್ಡರ್ ಮಾಡಿದ್ದ. ಆದರೆ ಸಿಕ್ಕಿದ್ದು ವೃತ್ತಾಕಾರದಲ್ಲಿ ಕತ್ತರಿಸಿದ ಈರುಳ್ಳಿ! ಈ ವಿಡಿಯೋ ನೋಡಿ ನೆಟ್ಟಿಗರು ನಕ್ಕಿದ್ದು, ಜೊತೆಗೆ ಫುಡ್ ಡೆಲಿವರಿ ಮಾಡಿದವರಿಗೆ ಹಿಡಿಶಾಪ ಹಾಕಿದ್ದಾರೆ.