ವಿಚ್ಛೇದನ ಸಂಭ್ರಮಿಸಲೂ ಆಹ್ವಾನ ಪತ್ರಿಕೆ!

ಸೋಮವಾರ, 12 ಸೆಪ್ಟಂಬರ್ 2022 (08:30 IST)
ನವದೆಹಲಿ: ಸಾಮಾನ್ಯವಾಗಿ ಮದುವೆ-ಮುಂಜಿ ಕಾರ್ಯಕ್ರಮಗಳಿಗೆ ಅದ್ಧೂರಿ ಆಮಂತ್ರಣ ಪತ್ರಿಕೆ ತಯಾರಿಸಿ ಆಹ್ವಾನಿಸುವುದನ್ನು ನೋಡಿದ್ದೇವೆ.ಆದರೆ ಭೋಪಾಲ್ ನಲ್ಲಿ ವ್ಯಕ್ತಿಯೊಬ್ಬ ತನ್ನ ವಿಚ್ಛೇದನ ಸಂಭ್ರಮಿಸಲು ಆಹ್ವಾನ ಪತ್ರಿಕೆ ತಯಾರಿಸಿದ್ದಾನೆ!

ಈ ಆಹ್ವಾನ ಪತ್ರಿಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಚ್ಛೇದನ ಆಹ್ವಾನ ಪತ್ರಿಕೆ ಎಂಬ ಒಕ್ಕಣೆಯೊಂದಿಗೆ ಪಾರ್ಟಿಗೆ ಆತ್ಮೀಯರನ್ನು ಆಹ್ವಾನಿಸಲಾಗಿದೆ.

ವಿಚ್ಛೇದನವಾಯಿತೆಂಬ ಕಾರಣಕ್ಕೆ ಒಬ್ಬರ ಜೀವನ ಅಲ್ಲಿಗೆ ಅಂತ್ಯವಾಯಿತು ಎಂದು ಅರ್ಥವಲ್ಲ. ವಿಚ್ಛೇದನವಾಗಿದೆಯೆಂದು ಕೊರಗಬೇಕೆಂದಿಲ್ಲ ಎಂದು ಇತರರಿಗೆ ಸ್ಪೂರ್ತಿ ತುಂಬುವ ಉದ್ದೇಶದಿಂದ ಈ ರೀತಿ ಆಹ್ವಾನ ಪತ್ರಿಕೆ ಪ್ರಕಟಿಸಿ ಪಾರ್ಟಿ ಮಾಡಲಾಗುತ್ತಿದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ