ಸುನಿಲ್ ಶೆಟ್ಟಿ ಬಂಗಲೆಯಲ್ಲೇ ಕೆಎಲ್ ರಾಹುಲ್-ಅಥಿಯಾ ಮದುವೆ?
ಆದರೆ ಇದುವರೆಗೆ ಇಬ್ಬರೂ ಯಾವಾಗ ಮದುವೆ ಎಂಬ ವಿಚಾರ ಬಹಿರಂಗಪಡಿಸಿಲ್ಲ. ಆದರೆ ಕೆಲವು ಮೂಲಗಳ ಪ್ರಕಾರ ರಾಹುಲ್-ಅಥಿಯಾ ಈಗಾಗಲೇ ಮದುವೆ ಬಳಿಕದ ಜೀವನಕ್ಕಾಗಿ ಮನೆ ಮಾಡಿದ್ದಾರೆ ಎಂಬ ಸುದ್ದಿ ಬಂದಿತ್ತು.
ಇದೀಗ ಮದುವೆ ಸುನಿಲ್ ಶೆಟ್ಟಿ ಅವರ ಖಂಡಾಲದಲ್ಲಿರುವ ಬಂಗಲೆಯಲ್ಲಿ ನಡೆಯಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಕ್ರಿಕೆಟ್ ನಿಂದ ಬಿಡುವು ಸಿಕ್ಕ ತಕ್ಷಣವೇ ಇಬ್ಬರೂ ಮದುವೆಯಾಗುವ ಯೋಜನೆ ಹಾಕಿಕೊಂಡಿದ್ದಾರಂತೆ.