ನವದೆಹಲಿ: ವಿವಾಹ ವಾರ್ಷಿಕೋತ್ಸವದ ದಿನ ಪತ್ನಿಗೆ ಪತಿ ಮಹಾಶಯನೊಬ್ಬ ಚಂದ್ರನ ಮೇಲೇ ನಿವೇಶನ ಖರೀದಿಸಿ ಉಡುಗೊರೆಯಾಗಿ ನೀಡಿದ ಘಟನೆ ರಾಜಸ್ಥಾನ್ ನಲ್ಲಿ ನಡೆದಿದೆ.
ಅಜ್ಮೀರದ ಧರ್ಮೇಂದ್ರ ಮತ್ತು ಅವರ ಪತ್ನಿ ಸಪ್ನ ಡಿಸೆಂಬರ್ 24 ರಂದು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಈ ದಿನಕ್ಕೆ ಪತ್ನಿಗೆ ಏನಾದರೂ ವಿಶೇಷ ಉಡುಗೊರೆ ಕೊಡಬೇಕೆಂದು ಧರ್ಮೇಂದ್ರ ತೀರ್ಮಾನಿಸಿದ್ದ. ಹೀಗಾಗಿ ಚಂದ್ರನ ಮೇಲೆ ಮೂರು ಎಕರೆ ನಿವೇಶನ ಖರೀದಿಸಿ ಉಡುಗೊರೆಯಾಗಿ ನೀಡಿದ್ದಾನಂತೆ! ಈ ರೀತಿ ರಾಜಸ್ಥಾನದಲ್ಲಿ ಚಂದ್ರನ ಮೇಲೆ ನಿವೇಶನ ಖರೀದಿಸಿದ ಮೊದಲ ವ್ಯಕ್ತಿ ಈತ. ಅಂತೂ ಪತ್ನಿಗೆ ಇದುವರೆಗೆ ಯಾರೂ ಕೊಡದ ಉಡುಗೊರೆ ಕೊಟ್ಟು ಖುಷಿಪಡಿಸಿದ್ದಾನೆ.