ತನ್ನ ಮಕ್ಕಳ 8 ವರ್ಷದ ಸ್ನೇಹಿತೆಯನ್ನೇ ಅತ್ಯಾಚಾರವೆಸಗಿದ ಪಾಪಿ
ಈತನಿಗೆ ಕ್ರಿಮಿನಲ್ ಹಿನ್ನಲೆಯಿತ್ತು. ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ ಆರೋಪದಲ್ಲಿ ಜೈಲು ಪಾಲಾಗಿ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಬಂದಿದ್ದ. ಇದೀಗ 8 ವರ್ಷದ ಬಾಲಕಿ ಮೇಲೆ ಈತನ ಕಾಮದ ಕಣ್ಣು ಬಿದ್ದಿತ್ತು.
ಈ ಸಂಬಂಧ ಬಾಲಕಿಯ ಅಜ್ಜಿ ನಿರ್ಭಯಾ ಪೊಲೀಸ್ ತಂಡಕ್ಕೆ ಕರೆ ಮಾಡಿ ದೂರು ನೀಡಿದ್ದರು. ಅದರಂತೆ ಘಟನೆ ನಡೆದ 12 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.