ಹೆಣ್ಣು ನಾಯಿಯ ಮೇಲೆರಗಿದ ಕಾಮುಕ
28 ವರ್ಷದ ಕಾಮುಕ ಹೆಣ್ಣು ನಾಯಿಯನ್ನು ಮನೆಯ ಬಾಲ್ಕನಿಗೆ ಕರೆದೊಯ್ದು ಲೈಂಗಿಕವಾಗಿ ಹಿಂಸಿಸಿದ್ದಾನೆ. ಆತನ ಕೃತ್ಯ ಗಮನಿಸಿದ ನೆರೆಹೊರೆಯವರು ಕಿರುಚಾಡಿ ಗಲಾಟೆ ಮಾಡಿದ್ದಾರೆ. ಆಗ ಸಿಕ್ಕಿಬೀಳುವ ಭಯದಲ್ಲಿ ಯುವಕ ನಾಯಿಯನ್ನು ಬಾಲ್ಕನಿಯಿಂದ ಕೆಳಕ್ಕೆ ಎಸೆದಿದ್ದಾನೆ.
ಮೂರನೇ ಮಹಡಿಯಿಂದ ಕೆಳಕ್ಕೆ ಬಿದ್ದ ನಾಯಿ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಕುಡಿತದ ಅಮಲಿನಲ್ಲಿ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.