ಪತ್ನಿ ಜೊತೆ ಮಿಲನ ಕ್ರಿಯೆ ನಡೆಸಲು ಹೊರಟಿದ್ದ ಪತಿಗೆ ಜನನಾಂಗ ನೋಡಿ ಶಾಕ್ !
ಸೋಮವಾರ, 14 ಮಾರ್ಚ್ 2022 (09:20 IST)
ನವದೆಹಲಿ: ಮದುವೆಯಾದ ಬಳಿಕ ಪತ್ನಿ ಜೊತೆಗೆ ಮಿಲನ ಕ್ರಿಯೆ ನಡೆಸಲು ಹೊರಟ ಗಂಡನಿಗೆ ಆಕೆಯ ಜನನಾಂಗ ನೋಡಿ ಶಾಕ್ ಕಾದಿತ್ತು! ಇದೀಗ ಪತಿ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದಾನೆ.
ಮದುವೆಯಾದ ಹೊಸತರಲ್ಲಿ ಪತ್ನಿ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ್ದಳು. ಕೊನೆಗೆ ಪತಿ ಬಲವಂತವಾಗಿ ಆಕೆಯ ಜೊತೆ ಲೈಂಗಿಕ ಕ್ರಿಯೆ ನಡೆಸಲು ಹೊರಟಾಗ ಆಕೆಯ ಜನನಾಂಗ ನೋಡಿ ಆತನಿಗೆ ಶಾಕ್ ಕಾದಿತ್ತು. ಯಾಕೆಂದರೆ ಆಕೆ ಮಹಿಳೆಯಾದರೂ ಜನನಾಂಗದ ರಚನೆ ಪುರುಷರಂತೆ ಇತ್ತು!
ಇದರಿಂದ ಶಾಕ್ ಗೊಳಗಾದ ಪತಿ ಸ್ಥಳೀಯ ನ್ಯಾಯಾಲಯಕ್ಕೆ ದೂರು ನೀಡಿದ್ದ. ನ್ಯಾಯಾಲಯದ ಆದೇಶದ ಮೇರೆಗೆ ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆಕೆಗೆ ಗರ್ಭಕೋಶ, ಗರ್ಭನಾಳ ಸೇರಿದಂತೆ ಒಳಗಿನ ರಚನೆ ಮಹಿಳೆಯಂತೆ ಇತ್ತು. ಆದರೆ ಹೊರಗೆ ಜನನಾಂಗ ಮಾತ್ರ ಪುರುಷರಂತಿದೆ ಎನ್ನುವುದು ಖಚಿತವಾಗಿತ್ತು. ಇದರಿಂದಾಗಿ ಆಕೆ ಜೊತೆ ಲೈಂಗಿಕ ಕ್ರಿಯೆ ನಡೆಸುವುದು ಮತ್ತು ಮಗು ಹೆಸರಲು ಸಾಧ‍್ಯವಿಲ್ಲ ಎಂದು ಸಾಬೀತಾಯ್ತು.
ಇದೀಗ ಪತಿ ಸ್ಥಳೀಯ ನ್ಯಾಯಾಲಯದಲ್ಲಿ ನ್ಯಾಯ ಸಿಗದ ಕಾರಣ ಸುಪ್ರೀಂಕೋರ್ಟ್ ಮೊರೆಹೋಗಿದ್ದು, ತನಗೆ ಪತ್ನಿ ಮತ್ತು ಮನೆಯವರಿಂದ ಮೋಸವಾಗಿದೆ ಎಂದು ದೂರಿದ್ದಾನೆ. ಇದೀಗ ಸುಪ್ರೀಂ ಕೋರ್ಟ್ ಪತ್ನಿಗೆ ನೋಟಿಸ್ ಜಾರಿ ಮಾಡಿದೆ.