ಕುಚಿಕು ಗೆಳೆಯನಿಗೆ ಆಕ್ಸಿಜನ್ ತರಲು ಸಾವಿರಾರು ಕಿ.ಮೀ. ಓಡಾಡಿದ!

ಗುರುವಾರ, 29 ಏಪ್ರಿಲ್ 2021 (09:45 IST)
ರಾಂಚಿ: ಕೊರೋನಾ ಪೀಡಿತ ಗೆಳೆಯನಿಗೆ ಆಕ್ಸಿಜನ್ ತರಲು ಇಲ್ಲೊಬ್ಬ ವ್ಯಕ್ತಿ 24 ಗಂಟೆಯ ಅವಧಿಯಲ್ಲಿ 1300 ಕಿ.ಮೀ. ಓಡಾಡಿರುವ ಘಟನೆ ನಡೆದಿದೆ!


ದೇವೇಂದ್ರ ಶರ್ಮಾ ಎಂಬ ವ್ಯಕ್ತಿ ರಾಂಚಿಯಿಂದ ಘಾಜಿಯಾಬಾದ್ ವರೆಗೆ ಸುಮಾರು 24 ಗಂಟೆಯ ಅವಧಿಯಲ್ಲಿ 1300 ಕಿ.ಮೀ. ಪ್ರಯಾಣ ಮಾಡಿದ್ದಾನೆ. ಆತನ ಗೆಳೆಯ ರಾಜನ್ ಗೆ ಇನ್ನೊಂದು ದಿನದಲ್ಲಿ ಆಕ್ಸಿಜನ್ ಖಾಲಿಯಾಗುವುದಿತ್ತು. ಹೀಗಾಗಿ ಆತನನ್ನು ಬದುಕಿಸಲು ಈ ಸಾಹಸ ಮಾಡಿದ್ದಾನೆ.

ತನ್ನ ಪರಿಚಯಸ್ಥರ ಬಳಿ ಕಾರು ಕೇಳಿ ಪಡೆದು ಬಿಡುವಿಲ್ಲದೇ ಓಡಾಡಿ ಹೇಗೋ ಆಕ್ಸಿಜನ್ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾನೆ. ಏಪ್ರಿಲ್ 25 ರಿಂದ 26 ರವರೆಗೆ ಬಿಡುವಿಲ್ಲದ ಓಡಾಟ ನಡೆಸಿ ಸ್ನೇಹಿತನಿಗೆ ಪ್ರಾಣ ವಾಯು ಕೊಡಿಸಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ