ಕೊರೋನಾ ಗೆದ್ದ ಧೋನಿ ತಂದೆ-ತಾಯಿ

ಗುರುವಾರ, 29 ಏಪ್ರಿಲ್ 2021 (09:36 IST)
ರಾಂಚಿ: ಕೊರೋನಾ ಸೋಂಕಿಗೊಳಗಾಗಿದ್ದ ಕ್ರಿಕೆಟಿಗ ಧೋನಿ ತಂದೆ ಪಾನ್ ಸಿಂಗ್ ಮತ್ತು ತಾಯಿ ದೇವಕಿ ಇದೀಗ ಚೇತರಿಸಿಕೊಂಡಿದ್ದಾರೆ.


ಕೊರೋನಾ ಸೋಂಕಿಗೊಳಗಾದ ಹಿನ್ನಲೆಯಲ್ಲಿ ಇಬ್ಬರೂ ರಾಂಚಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಗುಣಮುಖರಾದ ಹಿನ್ನಲೆಯಲ್ಲಿ ಇಬ್ಬರೂ ಡಿಸ್ಚಾರ್ಜ್ ಆಗಿದ್ದಾರೆ.

ಏಪ್ರಿಲ್ 20 ರಂದು ಇಬ್ಬರನ್ನೂ ರಾಂಚಿಯ ಪುಲೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಬ್ಬರ ಆರೋಗ್ಯವೂ ಸ್ಥಿರವಾಗಿತ್ತು. ಇದೀಗ ಡಿಸ್ಚಾರ್ಜ್ ಆದ ಬಳಿಕ ಧೋನಿ ತಂದೆ ಪಾನ್ ಸಿಂಗ್ ರನ್ನು ವೀಲ್ ಚೇರ್ ಮೂಲಕ ಹೊರಗೆ ಕರೆದೊಯ್ಯಲಾಗಿದೆ. ಇಬ್ಬರೂ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಆಸ್ಪತ್ರೆ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ