ಭಾರತಕ್ಕೆ ಆಕ್ಸಿಜನ್ ಖರೀದಿಗೆ ನೆರವು ನೀಡಿದ ಆಸೀಸ್ ವೇಗಿ ಬ್ರೆಟ್ ಲೀ

ಬುಧವಾರ, 28 ಏಪ್ರಿಲ್ 2021 (10:31 IST)
ನವದೆಹಲಿ: ಭಾರತದಲ್ಲಿ ಕೊರೋನಾ ರೋಗಿಗಳಿಗೆ ಅಗತ್ಯವಾಗಿರುವ ಆಕ್ಸಿಜನ್ ಖರೀದಿಗೆ ಮತ್ತೊಬ್ಬ ಆಸ್ಟ್ರೇಲಿಯಾ ಕ್ರಿಕೆಟಿಗ ಸಹಾಯ ಮಾಡಿದ್ದಾರೆ.


ಮಾಜಿ ವೇಗಿ ಬ್ರೆಟ್ ಲೀ ‘ಕ್ರಿಪ್ಟೋ ಪರಿಹಾರ ನಿಧಿ’ಗೆ ಸುಮಾರು 40 ಲಕ್ಷ ಮೌಲ್ಯದ ಬಿಟ್ ಕಾಯಿನ್ ನೀಡಿದ್ದಾರೆ. ಭಾರತ ನನಗೆ ಎರಡನೇ ತವರು ಮನೆಯಿದ್ದಂತೆ. ಇದೀಗ ಈ ದೇಶ ಸಂಕಷ್ಟದಲ್ಲಿದೆ. ಈ ಸಂದರ್ಭದಲ್ಲಿ ಭಾರತದ ಸಹಾಯಕ್ಕೆ ಧಾವಿಸುವುದು ನನ್ನ ಕರ್ತವ್ಯ ಎಂದು ಬ್ರೆಟ್ ಲೀ ಹೇಳಿದ್ದಾರೆ.

ಇದಕ್ಕೂ ಮೊದಲು ಕೋಲ್ಕೊತ್ತಾ ನೈಟ್ ರೈಡರ್ಸ್ ಪರ ಐಪಿಎಲ್ ಆಡುವ ವೇಗಿ ಪ್ಯಾಟ್ ಕ್ಯುಮಿನ್ಸ್ 50,000 ಡಾಲರ್ ಹಣವನ್ನು ಪಿಎಂ ಕೇರ್ ಗೆ ದೇಣಿಗೆಯಾಗಿ ನೀಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ