ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ? ಎಂದು ವಿಡಿಯೋ ಮಾಡಿಟ್ಟು ತಾನೇ ಆತ್ಮಹತ್ಯೆ ಮಾಡಿಕೊಂಡ ಯುವಕ

ಮಂಗಳವಾರ, 4 ಏಪ್ರಿಲ್ 2017 (10:01 IST)
ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ? ಎಂದು ವಿಡಿಯೊ ಮಾಡಿಟ್ಟು ತಾನೇ ಆತ್ಮಹತ್ಯೆ ಮಾಡಿಕೊಂಡ ಯುವಕನೊಬ್ಬ 19ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಂಬೈನ ಬಾಂದ್ರಾದ ಪಂಚತಾರಾ ಹೋಟೆಲ್`ನಲ್ಲಿ ನಡೆದಿದೆ.
 

23 ವರ್ಷದ ಅರ್ಜುನ್ ಭಾರದ್ವಾಜ್ ಆತ್ಮಹತ್ಯೆಗೀಡಾದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಆತ್ಮಹತ್ಯೆಗೂ ಮುನ್ನ ಸೂಸೈಡ್ ಮಾಡಿಕೊಳ್ಳುವುದು ಹೇಗೆ ಎಂಬ ವಿಡಿಯೋ ಮಾಡಿ ವಿಡಿಯೋವನ್ನ ಫೇಸ್ಬುಕ್`ನಲ್ಲಿ ಅಪ್ಲೋಡ್ ಮಾಡಿದ್ದಾನೆ.

ಬಳಿಕ ಹೋಟೆಲ್ ರೂಮಿನ ಗ್ಲಾಸ್ ಒಡೆದು ಬೆಳಗಿನ ಜಾವ 3 ಗಂಟೆ ಸುಮಾರಿಗೆ 19ನೇ ಮಹಡಿಯಿಂದ ಜಿಗಿದಿದ್ದಾನೆ. ಅಂದು ರಾತ್ರಿ ಭಾರದ್ವಾಜ್ ಕೊಠಡಿಗೆ ಯಾರಾದರೂ ಬಂದಿದ್ದರೇ ಎಂಬ ಬಗ್ಗೆ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ.

ಮುಂಬೈನಲ್ಲಿ ಕನ್ಸಲ್ಟೆಂಟ್ ಅಗಿ ಕೆಲಸ ಮಾಡುತ್ತಿದ್ದ ಭಾರದ್ವಾಜ್ ತಂದೆಯ ಹೇಳಿಕೆ ಪಡೆಯಲಾಗಿದೆ. ಭಾರದ್ವಾಜ್ ಕುಟುಂಬ ಬೆಂಗಳೂರಿನಲ್ಲಿ ನೆಲೆಯೂರಿದೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ