ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಅತ್ತೆ, ಮಾವನಿಂದ ಕಿರುಕುಳ; ಗೃಹಿಣಿ ನೇಣಿಗೆ ಶರಣು

ಬುಧವಾರ, 16 ಜನವರಿ 2019 (07:54 IST)
ಬೆಳಗಾವಿ : ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಅತ್ತೆ, ಮಾವ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಅಕ್ಷತಾ ವಿದ್ಯಾದರ ಕಾಕತಿಕರ (26) ಆತ್ಮಹತ್ಯೆಗೆ ಶರಣಾಗಿರುವ ಗೃಹಿಣಿ. ಅಕ್ಷತಾ ಎರಡು ವರ್ಷಗಳ ಹಿಂದೆ ಬೆಳಗಾವಿಯ ವಿದ್ಯಾದರ ಕಾಕತಿಕರ ಎಂಬಾತನನ್ನು ಮದುವೆಯಾಗಿದ್ದಳು ಮದುವೆಯಾದಾಗಿಂದ ಚಿನ್ನಾಭರಣಕ್ಕಾಗಿ ಪೀಡಿಸುತ್ತಿದ್ದ  ಗಂಡನ ಮನೆಯವರು ನಂತರ ಕಳೆದ ಒಂದು ವರ್ಷದ ಹಿಂದೆ ಅಕ್ಷತಾ ಹೆಣ್ಣ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಕಾರಣದಿಂದ ಆಕೆಗೆ ಮತ್ತಷ್ಟು ಕಿರುಕುಳ ನೀಡಲು ಶುರುಮಾಡಿದ್ದಾರೆ. ಅವರ ಕಾಟಕ್ಕೆ ಬೇಸತ್ತು ಅಕ್ಷತಾ ತನ್ನ ಬೆಡ್‍ರೂಂನಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.


 

ನನ್ನ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆಕೆಯ ಪತಿ, ಅತ್ತೆ-ಮಾವ ಕೊಲೆ ಮಾಡಿದ್ದಾರೆ ಎಂದು ಅಕ್ಷತಾಳ ತಂದೆ ಅಕ್ಷತಾ ಪತಿ ವಿದ್ಯಾದರ, ಮಾವ ಕುಂದನ್ ಕಾಕತಿಕರ ಹಾಗೂ ಅತ್ತೆ ಕಾಂಚನಾ ಕಾಕತಿಕರ ವಿರುದ್ಧ ಶಹಾಪುರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.


 

 ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ