ಪಾಟ್ನಾ: ಬಿಹಾರಲ್ಲಿ ಮೊದಲ ಬಾರಿ ಮಂಗಳಮುಖಿಯೊಬ್ಬರು ಪೊಲೀಸ್ ಇನ್‌ಸ್ಪೆಕ್ಟರ್ ಆಗಿ ಆಯ್ಕೆಯಾಗಿದ್ದಾರೆ. ಮಾನ್ವಿ ಮಧು ಕಶ್ಯಪ್ ಅವರು ಪೊಲೀಸ್ ಇನ್ಸ್‌ಸ್ಪೆಕ್ಟರ್ ಆಗಿ ಆಯ್ಕೆಯಾದ ಮಂಗಳಮುಖಿ.
ಎಎನ್‌ಐ ಜೊತೆ ಮಾತನಾಡಿದ ಮಾನ್ವಿ ಮಧು ಕಶ್ಯಪ್ ಅವರು, "ನಾನು ಇಂದು ಇಲ್ಲಿಗೆ ತಲುಪಲು ಸಹಾಯ ಮಾಡಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ರೆಹಮಾನ್ ಸರ್, ಗರಿಮಾ ಮೇಡಮ್ ಮತ್ತು ಇತರ ಎಲ್ಲ ಜನರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಜೀವನದಲ್ಲಿ ಸಾಕಷ್ಟು ಹೋರಾಟ ಮಾಡಿದ್ದೇನೆ. ಮಂಗಳಮುಖಿಯಾಗಿ ಈ ಸ್ಥಾನಕ್ಕೆ ಬರುವುದು ತುಂಬಾನೇ ಕಷ್ಟ. ಅಂತಿಮವಾಗಿ ನಾನು ಜೀವನದ ಈ ಹಂತಕ್ಕೆ ಬಂದು ನಿಂತಿದ್ದೇನೆ.
ಇನ್ನೂ ನಾನು ಮಂಗಳಮುಖಿಯೆಂದು ಕೆಲ ಕಂಪೆನಿಗಳಲ್ಲಿ ನನಗೆ ಉದ್ಯೋಗ ನೀಡಲಿಲ್ಲ. ನಾನು ಕೆಲಸಕ್ಕೆ ಸೇರಿದರೆ ಆ ಪರಿಸಹ ಹಾಳಾಗುತ್ತದೆ ಎಂದು ನನಗೆ ಕೆಲಸಕೊಡಲು ಕಂಪೆನಿಗಳು ಹಿಂದೇಟು ಹಾಕಿದ್ದವು.
"ನನ್ನ ಕುಟುಂಬ ನನಗೆ ತುಂಬಾ ಬೆಂಬಲ ನೀಡಿದೆ. ನನ್ನ ಪೋಷಕರು, ಸಹೋದರರು ಮತ್ತು ಸಹೋದರಿಯರು ಕಷ್ಟದ ದಿನಗಳಲ್ಲಿ ನನ್ನೊಂದಿಗೆ ಇದ್ದರು. ನಾನು ಇಲ್ಲಿ ಕುಳಿತುಕೊಳ್ಳಲು ಅವರೇ ಕಾರಣ." ಇದಲ್ಲದೆ, "ರೆಹಮಾನ್ ಸರ್, ನನಗೆ ಈ ಸಂಸ್ಥೆಗೆ ಪ್ರವೇಶ ಪಡೆಯಲು ಸಹಾಯ ಮಾಡಿದ ರೆಹಮಾನ್ ಇಂದು ಇತಿಹಾಸವನ್ನು ನಿರ್ಮಿಸಿದ್ದಾರೆ. ಅವರು ಶಿಕ್ಷಕರೇ ದೊಡ್ಡ ಕೊಡುಗೆ ಎಂದು ಅವರು ಸಾಬೀತುಪಡಿಸಿದ್ದಾರೆ. ಈ ತರಬೇತಿ ಅವಧಿಯಲ್ಲಿ ನನ್ನ ಎಲ್ಲಾ ಗೆಲುವುಗಳಿಗೆ ನಾನು ಅವರಿಗೆ ಋಣಿಯಾಗಿದ್ದೇನೆ" ಎಂದು ಅವರು ಹೇಳಿದರು. ಕುಟುಂಬ ಬೆಂಬಲವಾಗಿದೆ.