ಮುಸ್ಲಿಂ ವಿಚ್ಛೇದಿತ ಮಹಿಳೆಯರ ಪರ ಮಹತ್ವದ ತೀರ್ಪು ನೀಡಿದ ಸುಪ್ರೀಂಕೋರ್ಟ್

Krishnaveni K

ಬುಧವಾರ, 10 ಜುಲೈ 2024 (14:49 IST)
ನವದೆಹಲಿ: ವಿಚ್ಛೇದನಕ್ಕೊಳಗಾದ ಮುಸ್ಲಿಂ ಮಹಿಳೆಯರ ಪರವಾಗಿ ಸುಪ್ರೀಂ ಕೋರ್ಟ್ ಇದೀಗ ಮಹತ್ವದ ತೀರ್ಪೊಂದನ್ನು ನೀಡಿದೆ. ಅದರ ವಿವರಗಳು ಇಲ್ಲಿವೆ ನೋಡಿ.

ತೆಲಂಗಾಣದ ಮೊಹಮ್ಮದ್ ಅಬ್ದುಲ್ ಸಮದ್ ಎಂಬವರು ತಮ್ಮ ಪತ್ನಿಗೆ ವಿಚ್ಛೇದನ ನೀಡಿದ್ದರು. ಆದರೆ ವಿಚ್ಛೇದನ ನೀಡುವಾಗ ಆಕೆಗೆ 10,000 ರೂ. ಜೀವನಾಂಶ ನೀಡುವಂತೆ  ಹೈಕೋರ್ಟ್ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಮೊಹಮ್ಮದ್ ಅಬ್ದುಲ್ ಸಮದ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ.

ಪತ್ನಿಗೆ ಜೀವನಾಂಶ ನೀಡಬೇಕೆನ್ನುವ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ್ದ. ಆದರೆ ಇದೀಗ ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ. ಸೆಕ್ಷನ್ 125 ಪ್ರಕಾರ ವಿಚ್ಛೇದಿತ ಮಹಿಳೆಗೆ ಆಕೆಯ ಮಾಜಿ ಪತಿ ಜೀವನಾಂಶ ನೀಡಬೇಕು. ಇದು ಎಲ್ಲಾ ಧರ್ಮದವರಿಗೂ ಅನ್ವಯವಾಗುತ್ತದೆ ಎಂದಿದೆ.

ಸೆಕ್ಷನ್ 125 ಪ್ರಕಾರ ಜೀವನಾಂಶ ಬಯಸಿ ಕೋರ್ಟ್ ಮೊರೆ ಹೋಗುವ ಎಲ್ಲಾ ಮಹಿಳೆಯರಿಗೂ ಅವರ ಧರ್ಮದ ಬೇಧವಿಲ್ಲದೇ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಮಹಿಳೆ ಭಾವನಾತ್ಮಕವಾಗಿ ಮತ್ತು ಇತರೆ ರೀತಿಯಲ್ಲಿ ಅವಲಂಬಿತಳಾಗಿರುತ್ತಾಳೆ ಎಂಬ ಪ್ರಜ್ಞೆ ಗಂಡಂದಿರಲ್ಲಿ ಇರಲ್ಲ ಎಂದು ತೀರ್ಪು ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ