ಇಂದಿನಿಂದ ಲಾರಿ ಮುಷ್ಕರ ಮತ್ತಷ್ಟು ತೀವ್ರ

ಶನಿವಾರ, 8 ಏಪ್ರಿಲ್ 2017 (07:50 IST)
ವಿಮೆ ಕಂತಿನ ಪ್ರಮಾಣ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಲಾರಿ ಮಾಲೀಕರು ನಡೆಸುತ್ತಿರುವ ಮುಷ್ಕರ ಮತ್ತಷ್ಟು ತೀವ್ರಗೊಂಡಿದೆ. ನಿನ್ನೆ ಲಾರಿ ಮಾಲೀಕರು ಮತ್ತು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ನಡೆಸಿದ ಸಂಧಾನ ವಿಫಲಗೊಂಡಿದೆ. ಹೀಗಾಗಿ, ಮಧ್ಯರಾತ್ರಿಯಿಂದ ಲಾರಿ ಮಾಲೀಕರು ತಮ್ಮ ಪ್ರತಿಭಟನೆಯನ್ನ ದೇಶವ್ಯಾಪಿ ವಿಸ್ತರಿಸಿದ್ದಾರೆ. ಹೀಗಾಗಿ, ದೇಶಾದ್ಯಂತ ಸರಕು ಮತ್ತು ಸಾಗಣೆ, ದಿನನಿತ್ಯ ವಸ್ತುಗಳ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ವಿತ್ತ ಸಚಿವ ಅರುಣ್ ಜೇಟ್ಲಿ ಜೊತೆಯೂ ಲಾರಿ ಮಾಲೀಕರು ನಡೆಸಿದ ಸಂಧಾನ ಫಲಿಸಿಲ್ಲ. ಹಿಂದೆ ದಿನನಿತ್ಯ ಬಳಕೆ ವಸ್ತುಗಳ ಸರಬರಾಜಿಗೆ ವಿನಾಯ್ತಿ ನೀಡಿದ್ದ ಲಾರಿ ಮಾಲೀಕರು ಇವತ್ತು ಅದಕ್ಕೂ ಕಡಿವಾಣ ಹಾಕುವ ಸಾಧ್ಯತೆ ಇದೆ. ಇದರ ಪರಿಣಾಮ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

ಕಳೆದ ಕೆಲ ದಿನಗಳಿಂದ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್`ಗಳಲ್ಲೇ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಎಕೆ ನಡೆಸಲಾಗಿತ್ತು. ಲಾರಿಗಳನ್ನೇ ನಂಬಿಕೊಂಡಿರುವ ಎಪಿಎಂಸಿ ಮಾರುಕಟ್ಟೆಗಳಿಗೆ ಭಾರೀ ಹೊಡೆತ ಬೀಳುವ ಸಾಧ್ಯತೆ ಇದೆ.

ವೆಬ್ದುನಿಯಾವನ್ನು ಓದಿ