ಪ್ರಧಾನಿ ಮೋದಿಯನ್ನು ‘ನೀಚ’ ಎಂದ ಮಣಿಶಂಕರ್ ಅಯ್ಯರ್ ಗೆ ಕಾಂಗ್ರೆಸ್ ಗೇಟ್ ಪಾಸ್

ಶುಕ್ರವಾರ, 8 ಡಿಸೆಂಬರ್ 2017 (08:14 IST)
ನವದೆಹಲಿ: ಪ್ರಧಾನಿ ಮೋದಿಯನ್ನು ಟೀಕಿಸುವ ಭರದಲ್ಲಿ ಸಭ್ಯತೆ ಮೀರಿದ ಪದ ಬಳಕೆ ಮಾಡಿದ ಮಣಿಶಂಕರ್ ಅಯ್ಯರ್ ಗೆ ಕಾಂಗ್ರೆಸ್ ಪಕ್ಷ ಶೋಕಾಸ್ ನೋಟಿಸ್ ನೀಡಿರುವುದಲ್ಲದೆ, ಪಕ್ಷದಿಂದ ಅಮಾನತು ಮಾಡಿದೆ.
 

ಮೋದಿ ವಿರುದ್ಧ ಟೀಕೆ ಮಾಡುವಾಗ ಕಾಂಗ್ರೆಸ್ ಹಿರಿಯ ನಾಯಕ ಅಯ್ಯರ್ ಮೋದಿ ನೀಚ ಮತ್ತು ಅಷ್ಟೇ ಕೆಟ್ಟವರು ಎಂದು ವಾಗ್ದಾಳಿ ನಡೆಸಿದ್ದರು. ಅಯ್ಯರ್ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಸ್ವತಃ ರಾಹುಲ್ ಗಾಂದಿ ಅಯ್ಯರ್ ಬಹಿರಂಗವಾಗಿ ಟ್ವಿಟರ್ ಮೂಲಕ ಮೋದಿ ಕ್ಷಮೆ ಕೋರುವಂತೆ ಆಗ್ರಹಿಸಿದ್ದರು.

ಅಷ್ಟೇ ಅಲ್ಲದೆ, ಇದೀಗ ಕಾಂಗ್ರೆಸ್ ಪಕ್ಷ ಅವರನ್ನು ಅಮಾನತು ಮಾಡಿದ್ದು, ಇಂತಹ ಹೇಳಿಕೆ ನೀಡಿರುವುದರ ಹಿಂದಿನ ಉದ್ದೇಶವೇನೆಂದು ಕಾರಣ ಕೇಳಿ ನೀಡಿ ನೋಟಿಸ್ ಜಾರಿ ಮಾಡಿದೆ. ಈ ಮೂಲಕ ಹಿರಿಯ ನಾಯಕನ ವಿರುದ್ಧ ಕಾಂಗ್ರೆಸ್ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ