ಬೆಂಗಳೂರು: ಕುಮಾರಸ್ವಾಮಿಯದ್ದು ಖಾಲಿ ಟ್ರಂಕ್ ಎಂದು ಟೀಕಿಸಿದ ಡಿಸಿಎಂ ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿರುವ ರಾಜ್ಯ ಜೆಡಿಎಸ್ ಘಟಕ ಹೌದಪ್ಪಾ ಕುಮಾರಣ್ಣನದ್ದು ಖಾಲಿ ಕೈ ನೀವು ಲೂಟೇಶಿ ಎಂದು ಟ್ವೀಟ್ ಮಾಡಿದೆ.
ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಮಾಡುವ ಡಿಕೆ ಶಿವಕುಮಾರ್ ಆಫರ್ ಎಲ್ಲಾ ಬೋಗಸ್. ಇದು ಲೂಟಿ ಮಾಡುವ ಒಂದು ತಂತ್ರ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಆರೋಪ ಮಾಡಿದ್ದರು. ಅವರ ಆರೋಪಕ್ಕೆ ಡಿಕೆ ಶಿವಕುಮಾರ್ ಇಂದು ಕುಮಾರಸ್ವಾಮಿಯವರದ್ದು ಖಾಲಿ ಟ್ರಂಕ್ ಎಂದು ತಿರುಗೇಟು ನೀಡಿದ್ದರು.
ಇದಕ್ಕೆ ಜೆಡಿಎಸ್ ಸೋಷಿಯಲ್ ಮೀಡಿಯಾ ಎಕ್ಸ್ ಪುಟದಲ್ಲಿ ಇದಕ್ಕೆ ತಿರುಗೇಟು ನೀಡಿದ್ದಾರೆ. ಟ್ರಂಕ್ ತುಂಬಿಸಿಕೊಳ್ಳಲು ಹೊರಟಿರುವ ಡಿಕೆ ಶಿವಕುಮಾರ್ ಅವರೇ, ಕೇಳಿಸ್ಕೋಳ್ಳಿ.
ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ 5% ವಸೂಲಿಗೆ ಸ್ವತಃ ಕಾಂಗ್ರೆಸ್ ಪಕ್ಷದ ಮುಖಂಡರೇ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವರ್ಷದ ಹಿಂದಷ್ಟೇ ಸರ್ಕಾರ ಗೈಡ್ ಲೈನ್ಸ್ ವಾಲ್ಯೂ ಹೆಚ್ಚಳ ಮಾಡಿದ್ದು, ಈಗ ಖಾತೆ ಪರಿವರ್ತನೆಗೆ 5% ವಸೂಲಿ ಜನ ವಿರೋಧಿ ನಡೆಯಲ್ಲದೇ ಮತ್ತೇನು! ಸಣ್ಣ ಸೈಟ್ ಹೊಂದಿರುವವರು 5 ಲಕ್ಷ ರೂ. ಕಟ್ಟಲು ಸಾಧ್ಯವೇ ?
ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಹೆಸರಲ್ಲಿ ಬಡವರ ಸುಲಿಗೆ ಮಾಡುವ ಕಾರ್ಯಕ್ರಮ ಎಂದು ಕಾಂಗ್ರೆಸ್ಸಿಗರೇ ಛೀಮಾರಿ ಹಾಕುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಈ 5% ಹಗಲು ದರೋಡೆ ಕೈ ಬಿಟ್ಟು, ಅದಷ್ಟು ಕಡಿಮೆ ಮಾಡಿ ಬಡ ಜನರ ಬದುಕಿಗೆ ಆಸರೆಯಾಗಿ ಎಂದು ಆಗ್ರಹಿಸಿದೆ.