ಮನ್ ಕೀ ಬಾತ್; ಸಾರ್ವಜನಿಕರಿಂದ ಅನಿಸಿಕೆ ಆಹ್ವಾನಿಸಿದ ಮೋದಿ

ಭಾನುವಾರ, 17 ಅಕ್ಟೋಬರ್ 2021 (10:55 IST)
ದೆಹಲಿ : ಅಕ್ಟೋಬರ್ 24ರಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ನ 82ನೇ ಆವೃತ್ತಿಯಲ್ಲಿ ಮಾತನಾಡಲಿದ್ದಾರೆ. ಈ 82ನೇ ಎಪಿಸೋಡ್ನ ಮನ್ ಕೀ ಬಾತ್ಗಾಗಿ ವಿಚಾರಗಳು,  ಆಲೋಚನೆಗಳನ್ನು ಹಂಚಿಕೊಳ್ಳುವಂತೆ ಅವರು ಸಾರ್ವಜನಿಕರಿಗೆ ಕರೆ ನೀಡಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ತಿಂಗಳೂ ಈ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನುದ್ದೇಶಿಸಿ ಮಾತನಾಡುತ್ತಾರೆ. ಇದರಲ್ಲಿ ಅವರು ರಾಜಕೀಯ ಹೊರತಾಗಿ ಬೇರೆ ವಿಶೇಷ ವಿಷಯಗಳ ಬಗ್ಗೆ ಉಲ್ಲೇಖ ಮಾಡುತ್ತಾರೆ. ಕಳೆದ ಮನ್ ಕೀ ಬಾತ್ನಲ್ಲಿ ನದಿಗಳ ಮಹತ್ವ ತಿಳಿಸಿದ್ದರು. ನದಿಗಳ ದಿನದ ನೆನಪು ಮಾಡಿಕೊಟ್ಟಿದ್ದರು. ಹಾಗೇ ಟ್ವೀಟ್ ಮಾಡಿ, ಈ ತಿಂಗಳ ಮನ್ ಕೀ ಬಾತ್ಗಾಗಿ ಅನಿಸಿಕೆ ಹಂಚಿಕೊಳ್ಳಲು ಸಾರ್ವಜನಿಕರಿಗೆ ತಿಳಿಸಿದ್ದಾರೆ.
ದೇಶದಲ್ಲಿ ಕೊವಿಡ್ 19 ಲಸಿಕೆ ಅಭಿಯಾನ ಭರ್ಜರಿಯಾಗಿ ಸಾಗುತ್ತಿದೆ. ಮುಂದಿನ ವಾರ 100 ಕೋಟಿ ಗಡಿಯನ್ನೂ ದಾಟಿ ದಾಖಲೆ ನಿರ್ಮಿಸಲಿದೆ. ಇದರ ಮಧ್ಯೆ ದೇಶದಲ್ಲಿ ಕೊರೊನಾ ಸೋಂಕಿನ ಪ್ರಸರಣವೂ ತುಸು ಕಡಿಮೆಯಾಗಿದ್ದು, ಕೊವಿಡ್ 19 ಶಿಷ್ಟಾಚಾರಗಳ ಪಾಲನೆಯಲ್ಲೂ ಸಡಿಲತೆ ಕಂಡುಬಂದಿದೆ. ಹೀಗೆ ಸುಮಾರು ವಿಷಯಗಳಿದ್ದು, ಪ್ರಧಾನಿ ನರೇಂದ್ರ ಮೋದಿ ಈ ಬಾರಿ ತಮ್ಮ ಮನ್ ಕೀ ಬಾತ್ನಲ್ಲಿ ಯಾವ ವಿಚಾರವನ್ನು ಮಾತಿಗೆ ಎತ್ತಿಕೊಳ್ಳಬಹುದು ಎಂಬುದು ಕುತೂಹಲ ಹುಟ್ಟಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ