ಪತ್ನಿಗೆ ಇಷ್ಟವಿಲ್ಲದಿದ್ದರೂ ಸೆಕ್ಸ್ ನಡೆಸಿದರೆ ಅಪರಾಧವಲ್ಲ!

ಬುಧವಾರ, 30 ಆಗಸ್ಟ್ 2017 (09:07 IST)
ನವದೆಹಲಿ: ಇನ್ನು ವಿವಾಹಿತ ಪುರುಷರು ಸೆಕ್ಸ್ ಗೆ ತಮ್ಮ ಪತ್ನಿಯ ಒಪ್ಪಿಗೆ ಪಡೆಯಬೇಕಿಲ್ಲ. ಒಂದು ವೇಳೆ ಪತ್ನಿಯ ಸಮ್ಮತಿಯಿಲ್ಲದೇ ಲೈಂಗಿಕ ಸಂಪರ್ಕ ಮಾಡಿದರೆ ಅದನ್ನು ಅತ್ಯಾಚಾರವೆಂದು ಪರಿಗಣಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಕೇಂದ್ರ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಹೇಳಲಾಗಿದೆ.

 
ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಲಾಗದು. ಇದು ಪಾಶ್ಚಿಮಾತ್ಯ ಸಂಸ್ಕೃತಿ ಅದನ್ನು ಕಣ್ಣು ಮುಚ್ಚಿ ಅನುಕರಿಸಲಾಗದು. ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಿದರೆ ವಿವಾಹದ ಪಾವಿತ್ರ್ಯತೆಯೇ ಹಾಳಾಗುತ್ತದೆ ಎಂದು ಅಫಿಡವಿಟ್ ನಲ್ಲಿ ಹೇಳಲಾಗಿದೆ.

ಈಗಾಗಲೇ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ಹಲವರು ಪುರುಷರ ವಿರುದ್ಧ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು, ವೈವಾಹಿಕ ಅತ್ಯಾಚಾರವನ್ನೂ ಅಪರಾಧವೆಂದು ಪರಿಗಣಿಸಿದರೆ ಪುರುಷರ ಮೇಲೆ ಈ ಕಾನೂನನ್ನು ಮತ್ತಷ್ಟು ದುರ್ಬಳಕೆ ಮಾಡುವ ಸಂಭವವಿದೆ ಎಂದು ಅಫಿಡವಿಟ್ ನಲ್ಲಿ ನ್ಯಾಯವಾದಿ ಮೋನಿಕಾ ಅರೋರಾ ವಾದಿಸಿದ್ದಾರೆ.

ಇದನ್ನೂ ಓದಿ.. ಡಿಕೆಶಿಗೆ ಗೃಹಖಾತೆ ತಪ್ಪಿಸಿದ್ರಾ ಸಿಎಂ ಸಿದ್ದರಾಮಯ್ಯ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ