ಸರ್ಕಾರಿ ಹಣದಲ್ಲಿ ಮಸೀದಿ ನಿರ್ಮಿಸಬೇಡಿ: ಸುಪ್ರೀಂ ತಾಕೀತು

ಮಂಗಳವಾರ, 29 ಆಗಸ್ಟ್ 2017 (12:21 IST)
ನವದೆಹಲಿ: 2002 ರ ಗಲಭೆ ವೇಳೆ ಧ್ವಂಸಗೊಂಡ ಮಸೀದಿ ಮರು ನಿರ್ಮಾಣ ಮಾಡಲು ಸರ್ಕಾರದ ಹಣ ಬಳಸಬೇಡಿ ಎಂದು ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಖಡಕ್ ಆಗಿ ಸೂಚಿಸಿದೆ.

 
ಗಲಭೆ ವೇಳೆ  ಹಾನಿಗೀಡಾದ ಮಸೀದಿಗಳ ಮರು ನಿರ್ಮಾಣಕ್ಕೆ ಸರ್ಕಾರ ಸಹಾಯ ಮಾಡಬೇಕು ಎಂದು ಗುಜರಾತ್ ಹೈ ಕೋರ್ಟ್ ತೀರ್ಪು ನೀಡಿತ್ತು.

ಇದನ್ನು ಪ್ರಶ್ನಿಸಿ ಬಿಜೆಪಿ ನೇತೃತ್ವದ ಗುಜರಾತ್ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಇದರ ಬಗ್ಗೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಈ ತೀರ್ಪು ನೀಡಿದೆ. 2002 ರಲ್ಲಿ ಗೋಧ್ರಾ ದುರಂತದ ನಂತರ ನಡೆದ ಗಲಭೆಯಲ್ಲಿ ಹಲವು ಮಸೀದಿಗಳಿಗೆ ಹಾನಿಯಾಗಿತ್ತು.

ಇದನ್ನೂ ಓದಿ.. ಇಂದಿರಾ ಕ್ಯಾಂಟೀನ್ ಬಗ್ಗೆ ಶುಭ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ