ಮದುವೆಯಾಗಿ ಪತಿಯೊಂದಿಗೆ ಸುಂದರವಾದ ಸಂಸಾರ ಮಾಡುವ ಕೋಟಿ ಕೋಟಿ ಕನಸುಗಳೊಂದಿಗೆ ವಿವಾಹವಾಗಿದ್ದಳು. ಪತಿ ಮಕ್ಕಳೊಂದಿಗೆ ಸುಖ ಸಂಸಾರ ನಡೆಸಬೇಕು ಎನ್ನುವುದೇ ಆಕೆಯ ಸುಂದರ ಆಶಯವಾಗಿತ್ತು. ಆದರೆ, ವಿವಾಹವಾದ ಪತಿ ನಪುಂಸಕ ಎಂದು ತಿಳಿದ ನಂತರ ಪಾತಾಳಕ್ಕೆ ಕುಸಿದಿದ್ದಳು.
ನನ್ನ ನಪುಂಸಕತನವನ್ನು ಯಾರ ಮುಂದೆಯೂ ಹೇಳಬೇಡ ಎಂದು ಪತಿ ಮನವಿ ಮಾಡಿದ್ದರಿಂದ ನೋವನ್ನು ಮನಸ್ಸಿನಲ್ಲಿ ಅದುಮಿಟ್ಟುಕೊಂಡಿದ್ದಳು. ಆದರೆ, ಪತಿ ಚಿತ್ರಹಿಂಸೆ ನೀಡುತ್ತಿರುವಾಗ ಮಾತ್ರ ಆಕೆಗೆ ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಸಮಾಜದ ಮುಂದೆ ಪತಿಯ ರಹಸ್ಯವನ್ನು ಸ್ಫೋಟಿಸಬೇಕು ಎನ್ನುವ ಆಕ್ರೋಶ ಕಾಡುತ್ತಿತ್ತು. ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯ ಪೊಕಾಲ್ ಪಟ್ಟಣದಲ್ಲಿ ಈ ಘಟನೆ ವರದಿಯಾಗಿದೆ.
ಪುತ್ರ ನಪುಂಸಕ ಎನ್ನುವ ಬಗ್ಗೆ ಎಲ್ಲಿಯೂ ಹೇಳಬೇಡ ಎಂದು ಅತ್ತೆ, ಮಾವ, ಪತಿ ದುಂಬಾಲು ಬಿದ್ದಿದ್ದರು. ಮನೆಯ ಮರ್ಯಾದೆ ಹೋಗಬಾರದು ಎನ್ನುವ ಕಾರಣಕ್ಕೆ ದೀಪಿಕಾ ಮೌನಕ್ಕೆ ಶರಣುಹೋಗಿದ್ದಳು. ಆದರೆ, ಪತಿ ಯಾವಾಗ ತವರು ಮನೆಯಿಂದ ಹಣ ತರುವಂತೆ ಪೀಡಿಸಿ ಚಿತ್ರಹಿಂಸೆ ನೀಡಿದನೋ ಆವಾಗ ಆಕೆಯ ತಾಳ್ಮೆ ಕಟ್ಟೆ ಒಡೆದು ಹೋಯಿತು.