ಸಿಗರೇಟ್‌ನಿಂದ ಸುಟ್ಟು ಸಾಮೂಹಿಕ ಅತ್ಯಾಚಾರ! ಪತಿಯ ಕೈವಾಡವಿದೆ
ಸೋಮವಾರ, 17 ಜನವರಿ 2022 (06:17 IST)
ಭೋಪಾಲ್ : ರಕ್ಷಿಸಬೇಕಾದ ಪತಿ ತನ್ನ ಸ್ನೇಹಿತರಿಗೆ ಪತ್ನಿಯನ್ನು ಒಪ್ಪಿಸಿದ್ದಾನೆ. ಆಕೆಯ ಮೇಲೆ ಆ ನಾಲ್ವರು ಸಾಮೂಹಿಕ ಅತ್ಯಚಾರವೆಸಗಿ ಹಿಂಸೆ ನೀಡಿದ ಆರೋಪದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.
ಛತ್ತೀಸ್ಗಢ ಮೂಲದ ಈ ಮಹಿಳೆ ಇಂದೋರ್ ಮೂಲದ ವ್ಯಕ್ತಿಯನ್ನು ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ಭೇಟಿಯಾದ ನಂತರ ಇಬ್ಬರು ವಿವಾಹವಾಗಿದ್ದರು. ಆದರೆ ಆತನಿಗೆ ಈಗಾಗಲೇ ಬೇರೆಯವಳೊಂದಿಗೆ ಮದುವೆಯಾಗಿರುವುದು ಬೆಳಕಿಗೆ ಗೊತ್ತಾಗಿದೆ.
ಸಂತ್ರಸ್ತೆ ಹೇಗೋ ಫಾರ್ಮ್ಹೌಸ್ನಿಂದ ತಪ್ಪಿಸಿಕೊಂಡು ಛತ್ತೀಸ್ಗಢದಲ್ಲಿರುವ ತನ್ನ ಪೋಷಕರ ಮನೆಗೆ ಬಂದಿದ್ದಾಳೆ. ಅಲ್ಲಿಗೂ ಸಹ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಓರ್ವ ಹಿಂಬಾಲಿಸಿಕೊಂಡು ಬಂದಿದ್ದ.
ನನ್ನ ಪತಿ ತನ್ನನ್ನು ಕ್ರೂರವಾಗಿ ನಡೆಸಿಕೊಂಡಿದ್ದಾನೆ. ಇಷ್ಟೇ ಅಲ್ಲಾ, ಅವನು ತನ್ನ ಸ್ನೇಹಿತರಿಗೆ ನನ್ನನ್ನು ಒಪ್ಪಿಸಿದ್ದ, ಅವರೆಲ್ಲರೂ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ತನ್ನ ಮೇಲೆ ನಡೆದ ಕೃತ್ಯವನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾಳೆ.