ತಾಕತ್ತಿದ್ರೆ ಸಂಸತ್ ವಿಸರ್ಜಿಸಿ ಚುನಾವಣೆ ಘೋಷಿಸಿ: ಪ್ರಧಾನಿಗೆ ಮಾಯಾವತಿ ಸವಾಲ್

ಗುರುವಾರ, 24 ನವೆಂಬರ್ 2016 (15:37 IST)
ನೋಟು ನಿಷೇಧ ಕುರಿತಂತೆ ದೇಶದ ಜನತೆಯ ಅಭಿಪ್ರಾಯ ತಿಳಿಯಲು ಹೊಸದಾಗಿ ಚುನಾವಣೆ ಘೋಷಿಸಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಸವಾಲ್ ಹಾಕಿದ್ದಾರೆ.
 
 ಒಂದು ವೇಳೆ, ಪ್ರಧಾನಿ ಮೋದಿ ನಿಜವಾಗಿಯೂ ಪ್ರಾಮಾಣಿಕರಾಗಿದ್ದು, ನೋಟ್ ನಿಷೇಧ ಕುರಿತಂತೆ ನಿಜವಾದ ಸಮೀಕ್ಷೆ ಬಯಸಿದಲ್ಲಿ ಸಂಸತ್ತು ವಿಸರ್ಜಿಸಿ ಹೊಸದಾಗಿ ಚುನಾವಣೆ ಘೋಷಿಸಿ ಎಂದು ಆಗ್ರಹಿಸಿದರು.
 
ದೇಶಾದ್ಯಂತ ನೋಟು ನಿಷೇಧ ಕ್ರಮದ ಬಗ್ಗೆ ಶೇ.93 ರಷ್ಟು ಜನರು ಮೋದಿ ಪರವಾಗಿದ್ದಾರೆ ಎಂದು ಪ್ರದಾನಮಂತ್ರಿ ಕಚೇರಿ ಹೇಳಿಕೆ ನೀಡಿದ ಮಾರನೇ ದಿನವೇ ಮಾಯಾವತಿ ಸವಾಲ್ ಹೊರಬಿದ್ದಿದೆ.
 
ಚಳಿಗಾಲದ ಅಧಿವೇಶನದಲ್ಲಿ ನೋಟು ನಿಷೇಧ ಹೇರಿದ ಕೇಂದ್ರ ಸರಕಾರದ ಕ್ರಮದ ವಿರುದ್ಧ ವಿಪಕ್ಷಗಳು ಕೋಲಾಹಲ ಸೃಷ್ಟಿಸಿವೆ. ಎಲ್ಲಾ ವಿಪಕ್ಷಗಳು ಮೋದಿ ಸಂಸತ್ತಿನಲ್ಲಿ ಉಪಸ್ಥಿತರಿದ್ದು ಚರ್ಚೆಯಲ್ಲಿ ಪಾಲ್ಗೊಳ್ಳಲಿ ಎಂದು ಬಯಸುತ್ತಿರುವುದಾಗಿ ತಿಳಿಸಿದ್ದಾರೆ. 
 
ಕೇಂದ್ರದಲ್ಲಿ ಅಧಿಕಾರರೂಢವಾಗಿರುವ ಎನ್‌ಡಿಎ ಸರಕಾರ ಸಂಸತ್ ಕಲಾಪ ನಡೆಯಲು ಬಯಸುತ್ತಿಲ್ಲ. ವಿಪಕ್ಷಗಳಉ ಪ್ರಧಾನಿ ಹಾಜರಾತಿಯನ್ನು ಬಯಸುತ್ತಿವೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ