ನವದೆಹಲಿ : ಸರ್ಕಾರವನ್ನು ಟೀಕಿಸಿದ ಮಾತ್ರಕ್ಕೆ ಮಾಧ್ಯಮವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ಮಲಯಾಳಂ ಸುದ್ದಿ ವಾಹಿನಿಯ ಮೇಲಿನ ಕೇಂದ್ರದ ನಿರ್ಬಂಧಗಳನ್ನು ತೆಗೆದುಹಾಕಿದೆ.
ಸರ್ಕಾರದ ನೀತಿ, ಕಾರ್ಯಗಳ ವಿಚಾರವಾಗಿ ಮೀಡಿಯಾ ಒನ್ ಸುದ್ದಿ ವಾಹಿನಿ ಮಾಡಿರುವ ಟೀಕೆಗಳನ್ನು ರಾಷ್ಟ್ರವಿರೋಧಿ ಎಂದು ಅರ್ಥೈಸಲಾಗುವುದಿಲ್ಲ. ಉತ್ತಮ ಪ್ರಜಾಪ್ರಭುತ್ವಕ್ಕೆ ಸ್ವತಂತ್ರ ಪತ್ರಿಕಾ ವ್ಯವಸ್ಥೆ ಅಗತ್ಯ ಎಂದು ನ್ಯಾಯಾಲಯ ತಿಳಿಸಿದೆ.
ಭದ್ರತಾ ಅನುಮತಿಯ ಕೊರತೆಯಿಂದಾಗಿ ಚಾನೆಲ್ನ ಪ್ರಸಾರ ಪರವಾನಗಿಯನ್ನು ನವೀಕರಿಸಲು ನಿರಾಕರಿಸಿದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ರಾಷ್ಟ್ರೀಯ ಭದ್ರತಾ ಹಕ್ಕುಗಳನ್ನು ಗಾಳಿಗೆ ತೂರಿದ್ದಕ್ಕಾಗಿ ಗೃಹ ಸಚಿವಾಲಯವನ್ನು ಸುಪ್ರೀಂ ತರಾಟೆಗೆ ತೆಗೆದುಕೊಂಡಿದೆ.