ಪತ್ನಿಯ ತೂಕ ಕಡಿಮೆಯಾಗದ್ದಕ್ಕೆ ವೈದ್ಯನ ಮೇಲೆ ಶಿಕ್ಷಕನಿಂದ ಹಲ್ಲೆ
ಶುಕ್ರವಾರ, 4 ಡಿಸೆಂಬರ್ 2020 (08:53 IST)
ಸೂರತ್ : ಶಾಲಾ ಶಿಕ್ಷಕನೊಬ್ಬ 32 ವರ್ಷದ ವೈದ್ಯರ ಮೇಲೆ ಹಲ್ಲೆ ನಡೆಸಿ ಲೂಟಿ ಮಾಡಿದ ಘಟನೆ ಶ್ರೀಜಿ ಸೊಸೈಟಿ ಬಳಿ ನಡೆದಿದೆ.
ಶಿಕ್ಷಕ ತನ್ನ ಪತ್ನಿಯ ತೂಕ ಇಳಿಸುವ ಸಲುವ ಚಿಕಿತ್ಸೆಗಾಗಿ ವೈದ್ಯನಿಗೆ ಹಣ ನೀಡಿದ್ದಾನೆ. ಆದರೆ ಆಕೆಯ ತೂಕ ಕಡಿಮೆಯಾಗಿರಲಿಲ್ಲ. ಇದರಿಂದ ಬೇಸರಗೊಂಡ ಶಿಕ್ಷಕ ಹಣ ವಾಪಾಸು ನೀಡುವಂತೆ ಕೇಳಿದ್ದಾನೆ. ಆದರೆ ವೈದ್ಯ ಹಣ ವಾಪಾಸು ನೀಡಲು ನಿರಾಕರಿಸಿದ್ದಾನೆ. ಇಬ್ಬರ ನಡುವೆ ವಾಗ್ವಾದ ನಡೆದು ಶಿಕ್ಷಕ ವೈದ್ಯನ ಮೇಲೆ ಬ್ಲೇಡ್ ನಿಂದ ಹಲ್ಲೆ ಮಾಡಿ ಅಲ್ಲಿದ್ದ ಹಣವನ್ನು ಲೂಟಿ ಮಾಡಿದ್ದಾನೆ.
ತಕ್ಷಣ ವೈದ್ಯನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಶಿಕ್ಷಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.