ತೂಕ ನಷ್ಟವಾಗಲು ಸಬ್ಜಾ ಬೀಜಗಳನ್ನು ಈ ನೀರಿನಲ್ಲಿ ನೆನೆಸಿ ಕುಡಿಯಿರಿ
ಗುರುವಾರ, 3 ಡಿಸೆಂಬರ್ 2020 (08:33 IST)
ಬೆಂಗಳೂರು : ಸಬ್ಜಾ ಬೀಜಗಳು ಆರೋಗ್ಯಕ್ಕೆ ತುಂಬಾ ಉತ್ತಮ. ಈ ಬೀಜಗಳನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.
ಅಲ್ಲದೇ ಈ ಸಬ್ಜಾ ಬೀಜಗಳಿಂದ ನಮ್ಮ ದೇಹದ ತೂಕವನ್ನು ಕೂಡ ಇಳಿಸಿಕೊಳ್ಳಬಹುದು. ಅದು ಹೇಗೆ ಎಂದರೆ ತರಕಾರಿ ಬೇಯಿಸಿದ ನೀರಿನಲ್ಲಿ ಈ ಬೀಜಗಳನ್ನು ನೆನೆಸಿ. ಆಗ ಈ ಬೀಜ ನೀರನ್ನು ಹೀರಿಕೊಳ್ಳುತ್ತದೆ. ಬಳಿಕ ಈ ಬೀಜಗಳನ್ನು ಸೇವಿಸುವುದರಿಂದ ನಿಮಗೆ ಆಗಾಗ್ಗೆ ಹಸಿವಾಗುವುದಿಲ್ಲ. ಮತ್ತು ಹೆಚ್ಚುವರಿ ಕ್ಯಾಲೊರಿಗಳು ಆಹಾರದ ಮೂಲಕ ದೇಹಕ್ಕೆ ಹೋಗದಂತೆ ತಡೆಯುತ್ತದೆ. ಇದು ನಿಮ್ಮ ದೇಹವನ್ನು ಸದೃಢವಾಗಿರಿಸುತ್ತದೆ.