ತನ್ನ ಲೈಂಗಿಕ ಬಯಕೆಯನ್ನು ತಿರಸ್ಕರಿಸಿದ ಬಾಸ್ ನ ಪತ್ನಿಗೆ ಯುವಕ ಮಾಡಿದ್ದೇನು ಗೊತ್ತಾ?

ಬುಧವಾರ, 3 ಮಾರ್ಚ್ 2021 (07:57 IST)
ಥಾಣೆ : ತನ್ನ ಲೈಂಗಿಕ ಬಯಕೆಯನ್ನು ತಿರಸ್ಕರಿಸಿದ ಬಾಸ್ ನ ಪತ್ನಿಯನ್ನು 20 ವರ್ಷದ ಯುವಕನೊಬ್ಬ ಕೊಲೆ ಮಾಡಿದ ಘಟನೆ ಥಾಣೆಯಲ್ಲಿ ನಡೆದಿದೆ.

ಬಾಸ್ ತನ್ನ ಮನೆಗೆ ಊಟಕ್ಕೆ ಕರೆಸಿದಾಗ ಈ ಘಟನೆ ನಡೆದಿದೆ. ಬಾಸ್ ಕೆಲಸದ ಮೇಲೆ ಹೊರಗೆ ಹೋದಾಗ ಆ ವೇಳೆ ಆರೋಪಿ ತನ್ನ ಜೊತೆ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಒಪ್ಪಿಕೊಳ್ಳದ ಆಕೆ ಪತಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಕೋಪಗೊಂಡ ಯುವಕ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ಮನೆಗೆ ಬಂದ ಬಾಸ್ ರಕ್ತದ ಮಡಿಲಿನಲ್ಲಿ ಮಲಗಿದ್ದ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಆಕೆ ಸಾವನಪಪ್ಇದ್ದಾಳೆ ಎಂಬುದಾಗಿ ತಿಳಿದುಬಂದಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ