ರಾತ್ರಿ ಮನೆಯಿಂದ ಹೊರಗೆ ಬಂದ ಹುಡುಗಿಗೆ ಆಗಿದ್ದೇನು ಗೊತ್ತಾ?

ಬುಧವಾರ, 17 ಮಾರ್ಚ್ 2021 (08:25 IST)
ಅಲಿಗರ್ : ರಾತ್ರಿ ಮನೆಯಿಂದ ಹೊರಗೆ ಬಂದಿದ್ದ ಹುಡುಗಿಯನ್ನು ವ್ಯಕ್ತಿಯೊಬ್ಬ ಅಪಹರಿಸಿ ಮಾನಭಂಗ ಎಸಗಿದ ಘಟನೆ ಉತ್ತರ ಪ್ರದೇಶದ ಅಲಿಗರ್ ಜಿಲ್ಲೆಯಲ್ಲಿ ನಡೆದಿದೆ.

ಹುಡುಗಿಯನ್ನು ವ್ಯಕ್ತಿ ಕಾರಿನಲ್ಲಿ ಅಪಹರಿಸಿ ಚಾಕು ತೋರಿಸಿ ಬೆದರಿಕೆ ಹಾಕಿ ಮಾನಭಂಗ ಎಸಗಿದ್ದಾನೆ. ಆ ವೇಳೆ ಹುಡುಗಿ ಕೂಗಿಕೊಂಡಾಗ ಸಹಾಯಕ್ಕೆಂದು ಬಂದ ಚಿಕ್ಕಪ್ಪನಿಗೆ ಆರೋಪಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಅವರಿಗೆ ಸಣ‍್ಣಪುಟ್ಟ ಗಾಯಗಳಾಗಿದೆ. 

ಈ ಬಗ್ಗೆ ಹುಡುಗಿಯ ತಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ