ಯಮುನಾ ನಗರ್ : ನೇಪಾಳದ ಮಹಿಳೆಯೊಬ್ಬಳ ನ್ನು ಆಕೆಯ ಗಂಡನ ಮುಂದೆಯೇ 5 ಮಂದಿ ಪುರುಷರು ಮಾನಭಂಗ ಎಸಗಿದ ಘಟನೆ ಹರಿಯಾಣದ ಹಳ್ಳಿಯಲ್ಲಿ ನಡೆದಿದೆ.
ರಾತ್ರಿಯ ವೇಳೆ ಸಂತ್ರಸ್ತೆ ತನ್ನ ಪತಿ ಮತ್ತು ಮಗಳ ಜೊತೆ ಮನೆಯಲ್ಲಿ ಮಲಗಿದ್ದಾಗ, ಮನೆಗೆ ನುಗ್ಗಿದ 5 ಮಂದಿ ಆಕೆಯ ಪತಿಯನ್ನು ಹೊಡೆದು ಹಗ್ಗದಿಂದ ಕಟ್ಟಿ ಹಾಕಿ ಆಕೆಯ ಮೇಲೆ ಮಾನಭಂಗ ಎಸಗಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.