ಚಲಿಸುತ್ತಿರುವ ಕಾರಿನಲ್ಲಿಯೇ ಅಪ್ರಾಪ್ತೆಯ ಮೇಲೆ ಕಾಮುಕರ ಅಟ್ಟಹಾಸ
ಮಂಗಳವಾರ, 28 ಆಗಸ್ಟ್ 2018 (07:42 IST)
ಉತ್ತರ ಪ್ರದೇಶ : ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡರು ಕೂಡ ಇನ್ನು ಕಾಮುಕರ ಅಟ್ಟಹಾಸ ನಿಲ್ಲಲಿಲ್ಲ.
ಇದಕ್ಕೆ ನಿದರ್ಶನವೆಂಬಂತೆ 9ನೇ ತರಗತಿ ವಿದ್ಯಾರ್ಥಿನಿ ಒಬ್ಬಳ ಮೇಲೆ ಮೂವರು ಕಾಮುಕರು ಅತ್ಯಾಚಾರ ಎಸೆಗಿರುವ ಘಟನೆ ಉತ್ತರಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿ ಶಾಲೆಗೆ ಹೋಗುತ್ತಿರುವಾಗ ಶಾಲೆಯ ಬಳಿ ಬಿಡುವುದಾಗಿ ಕಾರು ಹತ್ತಿಸಿಕೊಂಡ ಕಾಮುಕರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.
ನಂತರ ಆಕೆಯನ್ನ ರೋಡ್ ಪಕ್ಕದಲ್ಲಿ ಇಳಿಸಿ ಪರಾರಿಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ