ಮಹಾತ್ಮ ಗಾಂಧೀಜಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಪೂಜಾ ಶಕುನ್‌ ಪಾಂಡೆ

ಭಾನುವಾರ, 26 ಆಗಸ್ಟ್ 2018 (07:14 IST)
ಉತ್ತರ ಪ್ರದೇಶ : ಅಖಿಲ ಭಾರತೀಯ ಹಿಂದೂ ಮಹಾಸಭಾದ (ಎಬಿಎಚ್‌ಎಂ) ರಾಷ್ಟ್ರೀಯ ಕಾರ್ಯದರ್ಶಿ ಡಾ. ಪೂಜಾ ಶಕುನ್‌ ಪಾಂಡೆ ಅವರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಉತ್ತರ ಪ್ರದೇಶದ ಮೀರತ್‌ನಲ್ಲಿ ದೇಶದ ಮೊದಲ 'ಹಿಂದೂ ನ್ಯಾಯಾಲಯ ಸ್ಥಾಪಿಸಿ, ಸ್ವಯಂ ಘೋಷಿತ ನ್ಯಾಯಧೀಶೆ ಆಗಿರುವ ಪೂಜಾ ಶಕುನ್‌ ಪಾಂಡೆ, ಮಹಾತ್ಮ ಗಾಂಧಿ ದೇಶವನ್ನು ವಿಭಜನೆ ಮಾಡಿ ಲಕ್ಷಾಂತರ ಹಿಂದೂಗಳ ಹತ್ಯೆಗೆ ಕಾರಣರಾಗಿದ್ದಾರೆ. ನಾಥುರಾಮ್‌ ಗೋಡ್ಸೆಗಿಂತ ನಾನು ಮೊದಲು ಹುಟ್ಟಿದ್ದರೇ ಮಹಾತ್ಮ ಗಾಂಧಿಯನ್ನು ನನ್ನ ಕೈಯಾರ ನಾನೇ ಹತ್ಯೆ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.


ಸ್ವತಂತ್ರ ಭಾರತದಲ್ಲಿ ಮತ್ತೆ ಯಾರಾದರೂ ಮಹಾತ್ಮರಾಗಲೂ ಯತ್ನಿಸಿದರೆ ಅವರನ್ನು ಕೊಲ್ಲುವುದಾಗಿ ಅವರು ಗಾಂಧಿ ಅನುಯಾಯಿಗಳಿಗೆ ಎಚ್ಚರಿಕೆ ಕೂಡ ನೀಡಿದ್ದಾರೆ. ಅಲ್ಲದೇ ಗಾಂಧಿಯನ್ನು ರಾಷ್ಟ್ರಪಿತ ಎಂದು ಕರೆಯಬಾರದು, ಅವರು ಈ ಬಿರುದನ್ನು ಹೇಗೆ ಪಡೆದರು ಎಂಬುದೇ ನನಗೆ ಗೊತ್ತಿಲ್ಲ, ಒಬ್ಬ ತಂದೆ ಇಬ್ಬರು ಮಕ್ಕಳನ್ನು ಬೇರೆ ಮಾಡುವುದಿಲ್ಲ, ದೇಶ ವಿಭಜನೆ ಮಾಡಿ ಹಿಂದೂಗಳ ಹತ್ಯೆಗೆ ಕಾರಣರಾದ ಗಾಂಧಿಯ ರಾಷ್ಟ್ರಪಿತ ಬಿರುದನ್ನು ವಾಪಾಸು ಪಡೆಯಬೇಕು ಎಂದಿದ್ದಾರೆ.


ಹಾಗೇ ನಾಥುರಾಮ್‌ ಗೋಡ್ಸೆಯನ್ನು ಮಹಾನ್‌ ದೇಶಭಕ್ತ ಎಂದು ಕರೆದ ಪಾಂಡೆ, ಗಾಂಧಿಯನ್ನು ಶ್ಲಾಘಿಸಿ, ಗೋಡ್ಸೆಯನ್ನು ರಾಕ್ಷಸನಂತೆ ಬಿಂಬಿಸುವ ಇತಿಹಾಸವನ್ನು ಇಂದಿನ ಪೀಳಿಗೆಗೆ ಹೇಳಿಕೊಡಲಾಗುತ್ತಿದೆ. ಬಿಜೆಪಿ ಸರ್ಕಾರ ಈ ಇತಿಹಾಸವನ್ನು ಬದಲಾವಣೆ ಮಾಡಿ ಗಾಂಧಿ ಜೀವನದರ್ಶನವನ್ನು ನಿಷೇದಿಸಬೇಕು ಎಂದು ಮನವಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ